ರಾಯಚೂರು : ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಟ್ರಕ್ ಗೆ ಡಿಕ್ಕಿಯಾಗಿ ಶಾಲಾ ವಾಹನದಲ್ಲಿರುವ ಎಂಟು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರೈಚೂರ್ ಜಿಲ್ಲೆಯ ಮಾನ್ವಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಎಂಟು ಮಕ್ಕಳಿಗೆ ಗಾಯಗಳಾಗಿದ್ದು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಞಚ್ ಸನ್ನಿಧಿ ಎಂಬ ವಿದ್ಯಾರ್ಥಿನಿಗೆ ಗಂಭೀರವಾದ ಗಯಗಳಾಗಿದ್ದು ಆಕೆಯನ್ನು ರಾಯಚೂರಿನ ಖಾಸಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆನ್ನೆ ಸಂಜೆ ನಡೆದಿರುವ ಅಪಘಾತ ಇಂದು ತಳವಾಗಿ ಬೆಳಕಿಗೆ ಬಂದಿದೆ.
ಮಾನ್ವಿ ಪಟ್ಟಣದ ಖಾಸಗಿ ಶಾಲೆಗೆ ಶಾಲಾ ವಾಹನ ಸೇರಿದೆ. ಮಕ್ಕಳನ್ನು ಬಿಟ್ಟು ಬರಲು ಕೊಟ್ನೆಕಲ್ ಗ್ರಾಮಕ್ಕೆ ಶಾಲಾ ವಾಹನ ತೆರುಳುತ್ತಿತ್ತು.ಸುಮಾರು 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಶಾಲಾ ಬಸ್ ಕರೆದುಕೊಂಡು ಹೋಗುತ್ತಿತ್ತು ಈ ವೇಳೆ ಟ್ರಕ್ ಓವರ್ಟೇಕ್ ಮಾಡಲು ಹೋಗಿ ಶಾಲಾ ಬಸ್ ಗೆ ಡಿಕ್ಕಿ ಹೊಡೆದಿದೆ. ಶಾಲಾ ಬಸ್ ಡಿಕ್ಕಿಯಾಗಿ ಎಂಟು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮಾನ್ವಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








