ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕಗ್ಗಂಟಾದ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಶಾಸಕ ಕದಲೂರು ಉದಯ್ ನೇತೃತ್ವದಲ್ಲಿ ಹೈಕಮಾಂಡ್ ಭೇಟಿಗೆ ತೆರಳಿದ್ದ ಶಾಸಕರ ನಿಯೋಗ ಮಂಗಳವಾರ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದೆ.
ಈ ವಿಚಾರವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಶಾಸಕ ಕದಲೂರು ಉದಯ್ ನಾವು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್ ಭೇಟಿಗೆ ಹೋಗಿರಲಿಲ್ಲ. ಇನ್ನು ಕೆಲ ದಿನಗಳಲ್ಲೇ ಸಚಿವ ಸಂಪುಟ ಪುನಾರಚನೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದ್ದು, ಈ ವಿಚಾರವಾಗಿಯೂ ಸಹ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಆದರೆ, ನಾನಂತು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಸ್ಥಾನ ನೀಡುವ ವಿಚಾರವಾಗಿ ಆ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತೆ. ಅದರ ಪರವಾಗಿ ನಾವು ಯಾವುದೇ ವಿಚಾರ ಪ್ರಸ್ತಾಪ ಮಾಡಿಲ್ಲ. ನಮ್ಮ ಹಿರಿಯ ಸಚಿವರು ಸಹ ಹೈಕಮಾಂಡ್ ಭೇಟಿ ಮಾಡಿ ಸಿಎಂ ಸ್ಥಾನದ ಗೊಂದಲ ಬಗೆಹರಿಸುವಂತೆ ಪ್ರಸ್ತಾಪ ಮಾಡಿದ್ದಾರೆ ಎಂದು ಶಾಸಕ ಉದಯ್ ತಿಳಿಸಿದರು.
ಆದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸ್ಥಾನ ನೀಡುವಂತೆ ಹಲವು ಬಾರಿ ಶಾಸಕ ಉದಯ್ ಬ್ಯಾಟಿಂಗ್ ಮಾಡಿರುವುದಂತು ಮಾತ್ರ ಜಗಜಾಹಿರಾಗಿರುವುದಂತು ಸತ್ಯವಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ ಕೃಷಿ ವಿವಿಗೆ ಮೂಲಸೌಕರ್ಯ ಕಲ್ಪಿಸಲು 100 ಕೋಟಿ ಅನುದಾನ: ಸಚಿವ ಎನ್.ಚಲುವರಾಯಸ್ವಾಮಿ








