ಬೆಳಗಾವಿ : ರಾಜ್ಯದಲ್ಲೊಂದು ಮನಕಲಕುವ ಘಟನೆ ನಡೆದಿದ್ದು, ತಾಯಿಯೊಬ್ಬಳು ತನಗೆ 4ನೇ ಮಗುವು ಹೆಣ್ಣಾಗಿ ಹುಟ್ಟಿದ್ದರಿಂದ ಬೇಸರಗೊಂಡು ತಾಯಿಯೊಬ್ಬಳು ಹಸುಗೂಸನ್ನೇ ಕತ್ತು ಹಿಸುಕಿ ಕೊಂದು ಹಾಕಿರುವಂತ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಹಸುಗೂಸನ್ನೇ ಪಾಪಿ ತಾಯಿಯೊಬ್ಬಳು ಕೊಂದು ಹಾಕಿದ್ದಾಳೆ. 3 ದಿನದ ಹೆಣ್ಣಮಗು ಕತ್ತು ಹಿಸುಕಿ ಕ್ರೂರಿ ತಾಯಿ ಕೊಂದು ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಹಿರೇಮುಲಂಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಶ್ವಿನಿ ಹಳಕಟ್ಟಿ(28) ಎಂಬುವರೇ ಹಸುಗೂಸು ಕೊಂದ ಪಾಪಿ ತಾಯಿಯಾಗಿದ್ದಾರೆ.
ನವೆಂಬರ್ 23ರಂದು ಮುದಕವಿಯಲ್ಲಿ ಅಶ್ವಿನಿಗೆ ಹೆರಿಗೆಯಾಗಿತ್ತು. ಗಂಡು ಮಗು ನಿರೀಕ್ಷೆಯಲ್ಲಿದ್ದ ಅಶ್ವಿನಿಗೆ ಹೆಣ್ಣುಮಗು ಜನಿಸಿದ್ದರಿಂದ ನಿರಾಸೆಯಾಗಿತ್ತು. ಮಗಳು ಉಸಿರಾಡ್ತಿಲ್ಲ ಅಂತ ಡ್ರಾಮಾವನ್ನು ಅಶ್ವಿನಿ ಮಾಡಿ ಆಸ್ಪತ್ರೆಗೆ ಮಗು ತಂದಿದ್ದಾರೆ. ಈ ವೇಳೆ ಅಶ್ವಿನಿ ಉಸಿರುಗಟ್ಟಿಸಿ ಹಸುಗೂಸು ಕೊಂದಿರುವಂತ ಕೃತ್ಯ ಬೆಳಕಿಗೆ ಬಂದಿದೆ.








