ಮಂಡ್ಯ : ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಡುವ ಮನಸ್ಸು ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಎಲ್ಲರಿಗೂ ಹೆದರಿಕೊಳ್ಳುವ ಸ್ಥಿತಿ ಇದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ನಿಯಮದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡ್ತಾರೆ ಅಂತ ಅನಿಸಲ್ಲ. ಸಿದ್ದರಾಮಯ್ಯ ಎಚ್‌ಡಿ ದೇವೇಗೌಡರ ಗರಡಿಯಲ್ಲಿ ಪಳಗಿದವರು. ಸಿದ್ದರಾಮಯ್ಯ ಬರಿ ಪಾಲಿಟಿಕ್ಸ್ ಕಲಿತರು. ಓಲೈಕೆ, ಗುರ್ ಅನ್ನೋದು ಬಿಟ್ಟರೆ ಪಾಲಿಟಿಕ್ಸ್ ಚೆನ್ನಾಗಿ ಮಾಡುತ್ತಾರೆ. ಎರಡೂವರೆ ವರ್ಷ ಒಳ್ಳೆಯ ಕೆಲಸ ಮಾಡಿದರೆ ಮುಂದುವರೆಯಲಿ ಅಂತಿದ್ರು ಸಿದ್ದರಾಮಯ್ಯ ಮುಂದುವರೆಯಲಿ ಅಂತ ಜನರೇ ಧ್ವನಿ ಎತ್ತುತ್ತಿದ್ದರು.
ಆದರೆ ಜನರು ಮುಖಕ್ಕೆ ಛಿ ಥು ಅಂತ ಉಗಿಯುತ್ತಿದ್ದಾರೆ. ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಕ್ರಮ ಮಾಡಿ ಹೋಗುತ್ತಿದ್ದಾರೆ. ಇವರು ಎಷ್ಟೊತ್ತಿಗೆ ತೊಳುಗುತ್ತಾರೋ ಅನ್ನೋ ಸ್ಥಿತಿ ಇದೆ 2023ರಲ್ಲಿ ಡಿಕೆ ಶಿವಕುಮಾರ್ ಸೋಲಿಸುವುದಕ್ಕೆ ಸಿದ್ಧರಾಮಯ್ಯಗೆ ಆಗಿಲ್ಲ. ಡಿಕೆ ಶಿವಕುಮಾರ್ ಹುಟ್ಟು ಹೋರಾಟಗಾರ, ರಾಜಕಾರಣ ಚೆನ್ನಾಗಿ ಮಾಡ್ತಾರೆ. ನ್ಯಾಯಯುತವಾಗಿ ಡಿಕೆ ಶಿವಕುಮಾರ್ಗೆ ಅಧಿಕಾರ ಸಿಗಬೇಕಿತ್ತು. ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದರು








