ಬೆಂಗಳೂರು: ಆ ಕುಟುಂಬಕ್ಕೆ ಹೊಟ್ಟೆ ತುಂಬ ಉಣ್ಣೋದಕ್ಕೆ ಇದ್ದದ್ದೇ ಒಂದು ರೇಷನ್ ಕಾರ್ಡ್. ಸಿಟಿ ಸೇರಿದರೂ, ಹೊಟ್ಟೆಗೆ ಬಿಪಿಎಲ್ ಕಾರ್ಡ್ ಅಕ್ಕಿಯೇ ಗಟ್ಟಿಯಾಗಿತ್ತು. ಕಾರಣ ಕಡಿಮೆ ಸಂಬಳದಲ್ಲೂ, ಅನ್ನ ರಾಮಯ್ಯ ಎಂಬ ಕೀರ್ತಿಗಳಿಸಿದ್ದಂತ ಸಿದ್ಧರಾಮಯ್ಯ ಕೊಡುತ್ತಿದ್ದ 10 ಕೆಜಿ ಅಕ್ಕಿ ಹೊಟ್ಟೆ ತುಂಬಿಸುತ್ತಿತ್ತು. ಆದರೇ ಕಂಪನಿಯವರು ಟಿಡಿಎಸ್ ಪಡೆಯೋದಕ್ಕೆ ಐಟಿ ಫೈಲ್ ಮಾಡಬೇಕು ಎಂದಿದ್ದಕ್ಕೆ ಮಾಡಿದ್ದರ ಕಾರಣ, ಬಿಪಿಎಲ್ ಕಾರ್ಡ್ ರದ್ದಗೊಂಡು ವ್ಯಥೆ ಪಡುವಂತಾಗಿದೆ. ಆ ಬಿಪಿಎಲ್ ಕಾರ್ಡ್ ರದ್ದಾದವರ ಕಥೆ ಮುಂದೆ ಓದಿ.
ರಾಜ್ಯದ ಹಳ್ಳಿಯೊಂದರಲ್ಲಿ ಅಪ್ಪ-ಮಗ ಇಬ್ಬರಿದ್ದರು. ಉದ್ಯೋಗ ಹರಸಿ ಬಂದಾಗ, ಹೆಚ್ಚು ಓದಿಲ್ಲದ ಅವರಿಗೆ ಜೀವನ ನಿರ್ವಹಣೆಗೆ ಸೇರಿದ್ದು ಸ್ವಿಗ್ಗಿಯಲ್ಲಿ ಪುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕಷ್ಟ ಪಟ್ಟು ದುಡಿದಂತ ದುಡ್ಡಿನಲ್ಲೇ ಕಂಪನಿಯಿಂದ ಟಿಡಿಎಸ್ ಕಡಿತಗೊಳಿಸಿ ಹಣವನ್ನು ನೀಡಲಾಗುತ್ತಿತ್ತು. ಒಂದು ವರ್ಷಗಳ ಹಿಂದೆ ಕೆಲಸ ಬಿಟ್ಟಾಗ, ಕಂಪನಿಯವರು ನಿಮ್ಮ ಕಡಿತದ ಟಿಡಿಎಸ್ ಪಡೆಯೋದಕ್ಕೆ ಐಟಿ ಫೈಲ್ ಮಾಡಿ ಎಂಬುದಾಗಿ ಸೂಚಿಸಿತ್ತು.
ಸ್ವಿಗ್ಗಿ ಕಂಪನಿಯವರು ಹೇಳಿದ್ದ ಕಾರಣ ತಾನು ದುಡಿದ ಹಣದಲ್ಲಿ ಟಿಡಿಎಸ್ ಕಡಿತಗೊಳಿಸಿದ್ದನ್ನು ಮರಳಿ ಪಡೋಯದಕ್ಕೆ ಆ ಕುಟುಂಬ ಸಿಎ ಬಳಿ ತೆರಳಿತ್ತು. ಅವರು ಕೇಳಿದಂತೆ ಮಾಹಿತಿ ನೀಡಿ ಐಟಿ ಫೈಲಿಂಗ್ ಕೂಡ ಮಾಡಿತ್ತು. ಸ್ವಿಗ್ಗಿ ಕಂಪನಿಯು ಕಡಿತಗೊಳಿಸಿದ್ದಂತ ಹಣವನ್ನು ಅಪ್ಪ-ಮಗನ ಪ್ಯಾನ್ ಸಂಖ್ಯೆಗೆ ಪಾವತಿಸಿದ್ದ ಒಂದಷ್ಟು ಹಣ ಕೂಡ ಐಟಿ ಫೈಲಿಂಗ್ ಬಳಿಕ ಬ್ಯಾಂಕ್ ಖಾತೆಗೂ ಜಮಾಗೊಂಡಿತ್ತು.
ಈ ಘಟನೆಯಾದ ಒಂದು ವರ್ಷದ ಬಳಿಕ ದಿಢೀರ್ ಅಪ್ಪ-ಮಗನಿಗೆ ನೀಡಿದ್ದಂತ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆ ಎಂಬುದಾಗಿ ನ್ಯಾಯಬೆಲೆ ಅಂಗಡಿಯವರು ರೇಷನ್ ಪಡೆಯಲು ಹೋದಾಗ ಹೇಳಿದ್ದನ್ನು ಕಂಡು ಆಘಾತಗೊಂಡರು. ಕಾರಣ ಏನೆಂದು ವಿಚಾರಿಸಿದಾಗ ನೀವು ಆದಾಯ ತೆರಿಗೆ ಪಾವತಿದಾರರು ಆಗಿದ್ದೀರಿ. ಹೀಗಾಗಿ ನಿಮ್ಮ ರೇಷನ್ ಕಾರ್ಡ್ ರದ್ದು ಪಡಿಸಲಾಗಿದೆ ಎಂಬುದಾಗಿತ್ತು.
ಅಯ್ಯೋ ನಾನೆಲ್ಲಿ ಆದಾಯ ತೆರಿಗೆ ಪಾವತಿಸಿದೆ. ಟಿಡಿಎಸ್ ಕಡಿತಗೊಳಿಸಿದ್ದನ್ನು ಮರಳಿ ಪಡೆಯೋದಕ್ಕೆ ಐಟಿ ಫೈಲ್ ಮಾಡಿದ್ದು. ಅದು ಆದಾಯ ತೆರಿಗೆ ಪಾವತಿಯಲ್ಲ ಎಂಬುದಾಗಿ ಯಾರನ್ನೇ ಗೋಗರೆದರೂ ಅದಕ್ಕೆ ಉತ್ತರವಿರಲಿಲ್ಲ. ಪರಿಹಾರವೂ ಇಲ್ಲದಂತಾಗಿತ್ತು. ರೇಷನ್ ಕಾರ್ಡ್ ರದ್ದಾಗಿ ಅಕ್ಕಿ ದೊರೆಯದೇ ಒಂದಷ್ಟು ದಿನ ಗೋಳಾಡಿದ ಆ ತಂದೆ-ಮಗ ಕೊನೆಗೆ ಅನ್ನಕ್ಕಾಗಿ ಬೇರೆ ದಾರಿ ಕಂಡುಕೊಳ್ಳುವಂತಾಯ್ತು.
ಐಟಿ ಫೈಲಿಂಗ್ ಎಫೆಕ್ಟ್ ನಿಂದ ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದರಿಂದ ಜೀವನ ನಿರ್ವಹಣೆಗಾಗಿ ಬ್ಯಾಂಕ್ ನಿಂದ ಸಾಲ ಪಡೆದು ತಳ್ಳೋ ಗಾಡಿ ಖರೀದಿಸಿ ಸೊಪ್ಪು, ತರಕಾರಿ ಮಾರುತ್ತಾ ಬದುಕು ಸಾಗಿಸುತ್ತಿದೆ. ನೋಡಿ ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಇವರು ಕೂಡ ನಿಮ್ಮ ದೃಷ್ಠಿಯಲ್ಲಿ ಆದಾಯ ತೆರಿಗೆ ಪಾವತಿದಾರರು. ಮನಸ್ಸು ಮಾಡಿ ಸ್ವಾಮಿ, ಒಮ್ಮೆ ಅವಕಾಶ ನೀಡಿ. ಇಂತಹ ಸಮಸ್ಯೆ ಪರಿಹರಿಸಿ ಎಂಬುದು ಇಂತಹ ಲಕ್ಷಾಂತರ ನೊಂದವರ ಕುಟುಂಬದ ಮನವಿಯಾಗಿದೆ.
ವಸಂತ ಬಿ ಈಶ್ವರಗೆರೆ…, ಸಂಪಾದಕರು
ಒಬ್ಬರ ಕಾರಣಕ್ಕೆ ‘BPL ಕಾರ್ಡ್ ರದ್ದು’ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ








