ಕೊಪ್ಪಳ : ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಮೀನುಗಾರರು ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದಿದೆ ಫಕೀರ್ ಸಾಬ್ (36) ಹಾಗೂ ಶರಣಪ್ಪ ಎಮ್ಮೆರ್ (32) ನಿರುಪಾಲಾಗಿದ್ದಾರೆ.
ನಿನ್ನೆ ಸಂಜೆ ಮೀನು ಹಿಡಿಯಲು ಫಕಿರ್ ಸಾಬ್ ಹಾಗು ಶರಣಪ್ಪ ಕೆರೆಗೆ ಹೋಗಿದ್ದರು. ಗಾಳಿಯ ರಭಸಕ್ಕೆ ತೆಪ್ಪ ಮಗುಚಿ ಇಬ್ಬರು ನಿರುಪಾಲಾಗಿದ್ದಾರೆ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರಿಂದ ಇಬ್ಬರ ಮೃತ ದೇಹಕ್ಕೆ ಶೋಧ ನಡೆಯುತ್ತಿದ್ದು ಸ್ಥಳಕ್ಕೆ ಯಲಬುರ್ಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.







