ಬೆಂಗಳೂರು : ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ, ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂಎಸ್ ಎಟಿಎಂ ವಾಹನ ಕಂಪನಿಯ ಮತ್ತೊಂದು ನಿರ್ಲಕ್ಷ ಬಯಲಾಗಿದೆ. ವಾಹನವನ್ನು ಸಿಎಂಎಸ್ ಕಂಪನಿ ಬಳಕೆ ಮಾಡುತ್ತಿತ್ತು.ಎಲ್ಲಾ ವಾಹನಗಳಲ್ಲಿ ನಾಲ್ಕು ಕ್ಯಾಮರಗಳು ಅಳವಡಿಕೆ ಆಗಿರುತ್ತದೆ.
ಹಳೆ ವಾಹನಗಳ ಸಿಸಿಟಿವಿ ವಿಜುವಲ್ ಡಿವಿಆರ್ ನಲ್ಲಿ ಮಾತ್ರ ಇರುತ್ತದೆ ಹೊಸ ವಾಹನಗಳ ಸಿಸಿಟಿವಿ ಕಂಟ್ರೋಲ್ ಮುಂಬೈನಲ್ಲಿದೆ ಸಿಸಿಟಿವಿ ರೆಕಾರ್ಡಿಂಗ್ ಮುಂಬೈನ ಕೇಂದ್ರ ಕಚೇರಿಯಲ್ಲಿ ಇರುತ್ತದೆ.ಬಹುತೇಕ ವಾಹನಗಳಲ್ಲಿ ಈ ರೀತಿ ಸಿಸಿಟಿವಿ ಅಪ್ಡೇಟ್ ಇಲ್ಲ ಇದೇ ಕಾರಣಕ್ಕೆ ಹಳೆ ವಾಹನ ಟಾರ್ಗೆಟ್ ಮಾಡಿ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ.








