ಬೆಂಗಳೂರು : ಬೆಂಗಳೂರಲ್ಲಿ ಕರ್ನಾಟಕದ ಇತಿಹಾಸದಲ್ಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದ್ದು 7 ಕೋಟಿ ಹಣವನ್ನು ದೋಚಿ ಪರಾರಿಯಾಗಿದ್ದಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇದುವರೆಗೂ 6 ಕೋಟಿ ಎಪ್ಪತ್ತು ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಇನ್ನುಳಿದ ಹಣ ಹಾಗೂ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂಎಸ್ ವಾಹನದಲ್ಲಿದ್ದ ಡಿವಿಆರ್ ಇನ್ನೂವರೆಗೂ ಪತ್ತೆಯಾಗಿಲ್ಲ. ಅರಣ್ಯ ಪ್ರದೇಶದಲ್ಲಿ ದರೋಡೆಗೆ ಡಿವಿಆರ್ ಅನ್ನು ಎಸೆದಿದ್ದು ಸಿಎಂಎಸ್ ವಾಹನದಲ್ಲಿದ್ದ ಡಿವಿಆರ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದರೋಡೆಯ ವೇಳೆ ಡಿವಿಆರ್ ಸಮೇತ ಹೊತ್ತೊಯ್ದಿದ್ದರು.
ಆರೋಪಿಗಳ ಗುರುತು ಸಿಗುತ್ತೆ ಅಂತ ಡಿವಿಆರ್ ಕೂಡ ಕಳ್ಳತನ ಮಾಡಿದ್ದಾರೆ. ಚಿತ್ತೂರು ಮಾರ್ಗದ ಅರಣ್ಯದಲ್ಲಿ ದರೋಡೆ ಗ್ಯಾಂಗ್ ಡಿವಿಆರ್ ಅನ್ನು ಎಸೆದಿದೆ. ಪ್ರಮುಖ ಸಾಕ್ಷಿ ಆಗಿರುವುದರಿಂದ ಡಿ ವಿ ಆರ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ 7 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.








