ಬೆಂಗಳೂರು: ಗಾಂಧಿನಗರ ಕ್ಷೇತ್ರದ ಕೆ.ಪಿ ಅಗ್ರಹಾರ, ನಾಗಮ್ಮ ನಗರ, ಕೇಶವ ನಗರ, ಅಶ್ವಥ ನಗರ ಹಾಗೂ ನೇತಾಜಿ ನಗರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕ ಉಪಯೋಗಕ್ಕಾಗಿ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗುವ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ವೇಳೆ, ವಿದ್ಯಾರ್ಥಿ- ಪೋಷಕರೊಂದಿಗೆ ಶಾಲಾ ವಾತಾವರಣ, ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. ಇನ್ನೂ ಇದೇ ಸಂಧರ್ಭದಲ್ಲಿ ಮನೆ-ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದಂತ ಅವರು, ಕಳೆದೆರಡು ವರ್ಷಗಳಿಂದ ಸರ್ಕಾರದಿಂದ ರಾಜ್ಯದ ಜನರಿಗೆ ನೀಡಲಾಗಿರುವ ಸವಲತ್ತುಗಳ ಕುರಿತು ಜನರೊಂದಿಗೆ ಸಮಲೋಚನೆ ನಡೆಸಿದಲ್ಲದೆ, ನಮ್ಮ ಸರ್ಕಾರದ ಜನಪರ ಯೋಜನೆಗಳಿಂದ ಸಾವಿರಾರು ಕುಟುಂಬಗಳ ಜೀವನ ಮಟ್ಟ ಸುಧಾರಿಸಿರುವುದನ್ನು ಕಂಡು ಸಂತೋಷವಾಯಿತು ಎಂದರು.
ಜನಪರ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿದೆ ಅಂದ್ರೆ ಆ ಯೋಜನೆ ಯಶಸ್ವಿಯಾಗಿವೆ ಎಂದರ್ಥ. ಹಾಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯದ ಬಡವರನ್ನು ತಲುಪಿವೆ ಎಂಬುದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತು ಎಂದು ಹೇಳಿದ್ದಾರೆ.








