ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಬಹುದೊಡ್ಡ ಬೆಳವಣಿಗೆಗಳು ಆಗುತ್ತಿದ್ದು ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ ಇದರ ಮಧ್ಯ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದ್ದು ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಹಾಗೂ ಒಂದು ಫ್ಲಾಟ್ ಆಫರ್ ನೀಡಲಾಗಿದೆ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರ ಬೆಂಬಲ ಸೂಚಿಸುವಂತೆ ಸಹಿ ಮಾಡಿಸಿಕೊಂಡಿರುವ ವಿಚಾರವಾಗಿ ಇಷ್ಟು ದಿನ ಕಾಂಗ್ರೆಸ್ ಬೇರೆ ಪಕ್ಷದಲ್ಲಿ ಕುದುರೆ ವ್ಯಾಪಾರ ಮಾಡುತ್ತಿದ್ದರು. ಇದೀಗ ತಮ್ಮ ಪಕ್ಷದಲ್ಲಿಯೇ ಕುದುರೆ ವ್ಯಾಪಾರ ಶುರು ಮಾಡಿದ್ದಾರೆ. ಕೆಲವೊಬ್ಬರು 75 ಕೋಟಿ 100 ಕೋಟಿ ಕೊಡಿ ಎಂದು ಡಿಮ್ಯಾಂಡ್ ಇಟ್ಟಿದ್ದಾರೆ ಎಂದರು. ಒಬ್ಬೊಬ್ಬ MLA ಗೆ 50 ಕೋಟಿ ಕೋಡುವುದಾಗಿ ಆಮಿಷವೊಡ್ಡಿದ್ದಾರಂತೆ. ಇನ್ನು ಕೆಲ ಶಾಸಕರಿಗೆ 50 ಕೋಟಿ ಜೊತೆ ಒಂದು ಫ್ಲ್ಯಾಟ್, ಒಂದು ಫಾರ್ಚೂನರ್ ಕಾರ್ ಆಫರ್ ಕೊಡಲಾಗಿದೆಯಂತೆ. ಈ ಬಗ್ಗೆ ನಾನು ಇಡಿಗೆ ದೂರು ನೀಡಬೇಕು ಎಂದಿದ್ದೇನೆ ಎಂದಿದ್ದಾರೆ.
ಇನ್ನು ರಣದೀಪ್ ಸುರ್ಜೇವಾಲಾ ಅವರು ಈಗಾಗಲೇ ಡೀಲ್ ಮಾಡಿಕೊಂಡಿದ್ದಾರೆ. ಮಂತ್ರಿ ಸ್ಥಾನಕ್ಕೆ ಶಾಸಕರಿಗೆ 200 ಕೋಟಿಗೆ ಬೇಡಿಕೆ ಇಡಲಾಗಿದೆ. ಈ ಮೊದಲೇ ಶಾಸಕ ವಿರೇಂದ್ರ ಪಪ್ಪಿ ಸುರ್ಜೇವಾಲಾಗೆ 200 ಕೋಟಿ ಪಾವತಿ ಮಾಡಿದ್ದಾರಂತೆ. ಜೈಲಿಗೆ ಸೇರುವ ಮೊದಲೇ ಅವರು ಅಡ್ವಾನ್ಸ್ ಆಗಿ ಹಣ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲು ಸುರ್ಜೇವಾಲಾರನ್ನು ಬಂಧಿಸಿ ತನಿಖೆ ನಡೆಸಬೇಕು. ನಾನು ಇಡಿಗೆ ದೂರು ನೀಡಬೇಕು ಎಂದಿದ್ದೇನೆ ಎಂದು ಹೇಳಿದ್ದಾರೆ.








