ಬೆಂಗಳೂರು: ಒಬ್ಬ ಐಎಎಸ್ ಅಧಿಕಾರಿ ಮನಸ್ಸು ಮಾಡಿದರೇ ಏನೆಲ್ಲ ಮಾಡಬಹುದು ಎಂಬುದಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರೇ ಸಾಕ್ಷಿಯಾಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದೇನು ಅಂತ ಮುಂದೆ ಓದಿ.
2017 ನೆ ಬ್ಯಾಚ್ ನ IAS ಅಧಿಕಾರಿ ಪ್ರಸನ್ನ .ಹೆಚ್ ಅವರು ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ಕಳೆದ ಒಂದೆರೆಡು ವರ್ಷಗಳಲ್ಲಿ KEA ಅನ್ನು ವಿದ್ಯಾರ್ಥಿಗಳ ಪರವಾಗಿ ಇರುವಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬುದು ಸಾರ್ವಜನಿಕರ ಮಾತಾಗಿದೆ.
UGCET, PGCET ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳನ್ನು ನಡೆಸುವ KEA ಕಳೆದ ವರ್ಷ ಡಿಸೆಂಬರ್ 27 ರಂದು 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಪರೀಕ್ಷೆಯನ್ನು ಕೂಡ ನಡೆಸಿತ್ತು. ಅದರ ಫಲಿತಾಂಶವನ್ನು 45 ದಿನಗಳಲ್ಲಿ ನೀಡಲಾಗಿದೆ.
ಈಗ ಒಂದು ಹೆಜ್ಜೆ ಮುಂದೆ ಹೋಗಿ ಇದೇ ತಿಂಗಳ ನವೆಂಬರ್.2ರಂದು ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (KSET) ನಡೆಸಿದ್ದ KEA ಕೇವಲ 20 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ.
ಒಬ್ಬ IAS ಅಧಿಕಾರಿ ಮನಸ್ಸು ಮಾಡಿದರೆ ತನ್ನ ಕೆಳಗಿನ ಅಧಿಕಾರಿಗಳು ಮತ್ತು ನೌಕರರಿಂದ ಹೇಗೆ ಕೆಲಸ ಮಾಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನ ಮಾಡಬಲ್ಲ ಅಂತ ಇವರು ತೋರಿಸಿಕೊಟ್ಟಿದ್ದಾರೆ.
KSET ಪರೀಕ್ಷೆಯನ್ನು 1,34,826 ಜನ ಬರೆದಿದ್ದರು. ಇಂತಹ ದೊಡ್ಡ ಮಟ್ಟದ ಪರೀಕ್ಷೆಯ ಫಲಿತಾಂಶವನ್ನು ಆ ಪರೀಕ್ಷೆ ನಡೆದ 20 ದಿನಗಳಲ್ಲಿ ಕೊಟ್ಟಿರುವುದನ್ನು ಇದೇ ಮೊದಲು ಆಗಿದೆ.. ತಾತ್ಕಾಲಿಕ ಕೀ ಉತ್ತರಗಳ ಪ್ರಕಟಣೆ ಹಾಗೂ ಆಕ್ಷೇಪಣೆಗೆ ಅವಕಾಶ, ಅಂತಿಮ ಕೀ ಉತ್ತರಗಳ ಪ್ರಕಟಣೆ, ತಾತ್ಕಾಲಿಕ ಅಂಕಪಟ್ಟಿ ಹೀಗೆ ಹಲವು ಹಂತಗಳ ನಂತರ ಅಂತಿಮ ಫಲಿತಾಂಶ ನೀಡಲಾಗಿದೆ.
ಒಟ್ಟಾರೆಯಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ.ಹೆಚ್ ಅವರ ಕೆಲಸಕ್ಕೆ ವಿದ್ಯಾರ್ಥಿಗಳು, ಪೋಷಕರು ಧನ್ಯವಾದವನ್ನು ಸಲ್ಲಿಸಿದ್ದಾರೆ. ಅವರ ಈ ಕೆಲಸ ಹೀಗೆ ಮುಂದುವರೆಯಲಿ. ಕೆಇಎ ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗಲಿ ಎಂಬುದಾಗಿ ಆಶಿಸೋಣ.
BIG NEWS: ಸಾಗರದ ‘ಕಲ್ಮನೆ ಗ್ರಾಮ ಪಂಚಾಯ್ತಿ’ ನರೇಗಾ ಹಗರಣ: ಸರ್ಕಾರಕ್ಕೆ ‘ತನಿಖಾ ವರದಿ’ ಸಲ್ಲಿಕೆ, ಏನಿದೆ ಗೊತ್ತಾ?
ಹೀಗಿದೆ ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ಯಡಿ ಕೈಗೊಳ್ಳಬಹುದಾದ ‘ಕಾಮಗಾರಿ’ಗಳ ಪಟ್ಟಿ








