ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಅಂತ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಾರೆ ಮತ್ತೊಂದೆಡೆ ಸಿದ್ದರಾಮಯ್ಯ ಅವರನ್ನು ತೆಗಿರಿ ಅಂತ ಡಿಕೆ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ ಸಿಎಂ ಸ್ಥಾನ ನನಗೆ ಬೇಕು ಅಂತ ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ ಆದರೆ ಸಿಎಂ ಸ್ಥಾನ ಬಿಡಲು ಸಿದ್ಧರಾಮಯ್ಯ ತಯಾರಿಲ್ಲ ಅದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಮಗೆ ಆಡಳಿತ ನಡೆಸಲು ಆಗದಿದ್ದರೆ ಬಿಟ್ಟು ಮನೆಗೆ ಹೋಗಿ. ಸರ್ಕಾರ ಬಿದ್ದು ಹೋಗಲಿ ಅನ್ನೋದು ನಮ್ಮ ಉದ್ದೇಶ ಅಲ್ಲ. ರಾಜ್ಯದಲ್ಲಿ ಈಗ ಶಾಸಕರ ಖರೀದಿ ಜೋರಾಗಿದೆ. ರಾಜ್ಯದಲ್ಲಿ ಮತ್ತೊಬ್ಬ ಏಕನಾಥ ಶಿಂಧೆ ಹುಟ್ಟುವುದಿಲ್ಲ. ಯಾವುದೇ ಕಾರಣಕ್ಕೂ ಈ ಸರ್ಕಾರ ಬೀಳಲಿ ಅಂತ ಬಯಸುವುದಿಲ್ಲ. ರಾಜ್ಯದ ಜನ ಬಹುಮತ ನೀಡಿದ್ದು ಐದು ವರ್ಷ ಸರ್ಕಾರ ನಡೆಸಲಿ ಅಂತ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹಲಾದ ಜೋಶಿ ಹೇಳಿಕೆ ನೀಡಿದರು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಹ್ಲಾದ್ ಜೋಶಿ, ರಾಹುಲ್ ಗಾಂಧಿಗೆ ಇಂಡಿಯಾ ಫುಲ್ ಫಾರ್ಮ್ ಹೇಳಲು ಬರಲ್ಲ. ಇಂಡಿಯಾ ಮೈತ್ರಿಕೂಟದ ಫುಲ್ ಫಾರಂ ರಾಹುಲ್ ಗಾಂಧಿ ಹೇಳಲಿ ನೋಡೋಣ? ಇಂಡಿಯಾ ಮೈತ್ರಿಕೂಟ ಮತ್ತು ಘಟಬಂಧನ್ ಹುಟ್ಟಿದ್ದೆ ಅಂಗವಿಕಲತೆಯಿಂದ ಹೀಗಾಗಿ ಆ ಕೂಟಗಳು ಸಾಯುವುದು ನೈಸರ್ಗಿಕ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.








