ಚಾಮರಾಜನಗರ : ಬೆಂಗಳೂರಲ್ಲಿ 7 ಕೋಟಿ 11 ಲಕ್ಷ ದರೋಡೆ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ರಾಜ್ಯದಲ್ಲಿ ಮತ್ತೊಂದು ದರೋಡೆ ನಡೆದಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ವ್ಯಾಪಾರಿಯ ಕಾರು ಅಡ್ಡಗಟ್ಟಿ ಕೋಟ್ಯಾಂತರ ಮೌಲ್ಯದ ನಾಣ್ಯ ದರೋಡೆ ಮಾಡಲಾಗಿದ.
ಹೌದು ಕೇರಳದ ದರೋಡೆ ಗ್ಯಾಂಗ್ ಒಂದು ತಡರಾತ್ರಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬಂಡಿಪುರ ಅರಣ್ಯದಲ್ಲಿ ಚಿನ್ನದ ವ್ಯಾಪಾರಿ ಕಾರನ್ನು ಅಡ್ಡಗಟ್ಟಿ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಮೂಲೆಹೊಳೆ ಮೂಲಕ ಕೇರಳಕ್ಕೆ ಚಿನ್ನದ ವ್ಯಾಪಾರಿ ತೆರಳಿದ್ದ. ವ್ಯಾಪಾರವನ್ನು ಹಿಂಬಾಲಿಸಿ ಕೆರಳ ಗ್ಯಾಂಗ್ ದರೋಡೆ ಮಾಡಿದೆ.
ಕಳೆದ 3-4 ವರ್ಷಗಳಿಂದ ಈ ಒಂದು ಕೇರಳ ಗ್ಯಾಂಗ್ ಸಕ್ರಿಯವಾಗಿದೆ ದೂರು ನೀಡಲು ಚಿನ್ನದ ವ್ಯಾಪಾರಿ ಮೀನಾ ಮೇಷ ಎಣಿಸುತ್ತಿದ್ದು, ಪ್ರಕರಣದ ಮಾಹಿತಿ ಸೋರಿಕೆ ಆಗದಂತೆ ವ್ಯಾಪಾರಿ ನೋಡಿ ಅಂತ ಹೇಳಿದ್ದ. ಪೊಲೀಸರು ಗದರಿದ ನಂತರ ವ್ಯಾಪಾರಿ ಗುಂಡ್ಲುಪೇಟೆ ಠಾಣೆಗೆ ಬಂದಿದ್ದಾನೆ ದೂರು ನೀಡಲು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ವ್ಯಾಪಾರಿ ಬಂದಿದ್ದಾನೆ. ಸದ್ಯ ಪೊಲೀಸರಿಂದ ಚೆಕ್ಪೋಸ್ಟ್ ಬಳಿಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ








