ಟುಮಾಕ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಜಟಾಪಟಿ ನಡೆಯುತ್ತಿದ್ದು ಒಂದು ಕಡೆ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಮುಂದಿನ ಎರಡು ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ ಎಂದು ಹೇಳುತ್ತಿದ್ದರೆ ಇನ್ನೊಂದು ಕಡೆ ಡಿಕೆ ಶಿವಕುಮಾರ್ ಬೆಂಬಲಿಗರು ಹಲವು ಸಚಿವರು ಹಾಗೂ ಶಾಸಕರು ದೆಹಲಿಗೆ ಭೇಟಿ ನೀಡಿ ಡಿಕೆ ಶಿವಕುಮಾರ್ ಅವರ ಪರವಾಗಿ ಬೆಂಬಲ ಸೂಚಿಸಿದ್ದಾರೆ.
ಇದರ ಮಧ್ಯ ತುಮಕೂರಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳು ಆದಷ್ಟು ಬೇಗ ಸಿಎಂ ಆಗಲಿ ಎಂದು ಅವರ ಅಭಿಮಾನಿಗಳು 91 ಕೆಜಿ ಎಳ್ಳಿನ ತುಲಾಭಾರ ನೆರವೇರಿಸಿ ಪ್ರಾರ್ಥನೆ ಮಾಡಿದ್ದಾರೆ. ಹೌದು ಡಿಕೆ ಸಿಎಂ ಅಗಲಿ ಎಂದು ಅಭಿಮಾನಿಗಳಿಂದ ಪೂಜೆ ನೆರವೇರಿಸಿದ್ದು, ಪಾವಗಡದ ಶನಿ ಮಹಾತ್ಮ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿರುವ ಶನಿ ಮಹಾತ್ಮನ ದೇವಸ್ಥಾನದಲ್ಲಿ 91 ಕೆಜಿ ಎಳ್ಳಿನ ತುಲಾಭಾರ ಮಾಡಿದ ಅಭಿಮಾನಿಗಳು ಡಿಕೆ ಶಿವಕುಮಾರ್ ಗೆ ಇರುವ ಶನಿ ಹಾಗೂ ಕುಜ ದೋಷ ದೂರ ಆಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ ಮುಖ್ಯಮಂತ್ರಿ ಪಟ್ಟ ಡಿಕೆ ಶಿವಕುಮಾರ್ ಅವರಿಗೆ ಒಲಿದು ಬರಲಿ ಅಂತ ಹೇಳಿ ಪ್ರಾರ್ಥನೆ ಮಾಡಿದ್ದಾರೆ. ನವಗ್ರಹಗಳಿಗೆ ವಿಶೇಷ ತೈಲ ಅಭಿಷೇಕ ಮಾಡಲಾಗಿದೆ.








