ಬೆಂಗಳೂರು: ನಗರದಲ್ಲಿ ಎಟಿಎಂಗೆ ತುಂಬೋದಕ್ಕೆ ಕೊಂಡೊಯ್ಯುತ್ತಿದ್ದಂತ ಹಣವನ್ನು ಆರ್ ಬಿ ಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಪ್ರಕರಣದಲ್ಲಿ ಕಿಂಗ್ ಪಿನ್ ರವಿ ಎಂಬುದಾಗಿ ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು. ಅಲ್ಲದೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ನಿನ್ನೆ ರಾತ್ರಿ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತನ್ನ ಪತಿ ರವಿ, 7.11 ಕೋಟಿ ದರೋಡೆ ಕೇಸಲ್ಲಿ ಭಾಗಿಯಾಗಿರೋದನ್ನು ಅವರ ಪತ್ನಿ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ. ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ರವಿತ ಪತ್ನಿ ತೆರಳಿರೋದಾಗಿ ಹೇಳಲಾಗುತ್ತಿದೆ.
ತನ್ನ ಪತಿ ರವಿ ಬೆಂಗಳೂರಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಲಾಸ್ ಆಗಿ ಕೆಲಸ ಇಲ್ಲದೇ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ರಾಬರಿಗೆ ಸಂಚು ರೂಪಿಸಿದ್ದರು. ಹಣ ದರೋಡೆಗೂ ಪ್ಲಾನ್ ಮಾಡಿದ್ದ ಪ್ರಕರಣದಲ್ಲಿ ಕಿಂಗ್ ಪಿನ್ ತನ್ನ ಪತಿ ರವಿ ಎಂಬುದಾಗಿ ಪತ್ನಿ ಪೊಲೀಸರ ಮುಂದೆ ಬಾಯಿ ಬಿಟ್ಟಿರೋದಾಗಿ ತಿಳಿದು ಬಂದಿದೆ.
BREAKING : ‘ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ’ ; ಇಂದಿನಿಂದ ‘ಹೊಸ ಕಾರ್ಮಿಕ ಸಂಹಿತೆ’ಗಳು ಜಾರಿ








