ಮಂಡ್ಯ: ಭವಿಷ್ಯದಲ್ಲಿ ಪಕ್ಷ ಸಂಘಟನೆ ಡಿಕೆಶಿಗೆ ಸಿಎಂ ಪಟ್ಟ ಸಿಗಬೇಕು. ಕೊಟ್ಟ ಮಾತಿಗೆ ಹೈಕಮಾಂಡ್ ತಪ್ಪಬಾರದು. ಡಿಕೆಶಿ ಶ್ರಮಕ್ಕೆ ತಕ್ಕ ಫಲ ಸಿಗಬೇಕು ಎಂಬುದಾಗಿ ಡಿಕೆಶಿ ಪರ ಶಾಸಕ ಕದಲೂರು ಉದಯ್ ಬ್ಯಾಟ್ ಬೀಸಿದ್ದಾರೆ.
ಇಂದು ಡಿಸಿಎಂ ಡಿಕೆಶಿ ಸಿಎಂ ಚರ್ಚೆ ವಿಚಾರವಾಗಿ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, ಹೈಕಮಾಂಡ್ ಮಟ್ಟದಲ್ಲಿ ಇದು ತೀರ್ಮಾನ ಆಗಿರುತ್ತೆ. ಒಬ್ಬೊಬ್ಬರು ಒಂದೊಂದು ಮಾತು ಹೇಳ್ತಾರೆ ಅಷ್ಟೆ. ಇದಕ್ಕೆಲ್ಲ ಹೈಕಾಮಂಡ್ ಪರಿಹಾರ ಕೊಡಬೇಕು. ಬಹಳಷ್ಟು ಶಾಸಕರಿಗೆ ಅಭಿಲಾಷೆ ಇದೆ ಆ ನಿಟ್ಟಿನಲ್ಲಿ ದೆಹಲಿಗೆ ಶಾಸಕರು ಹೋಗಿದ್ದಾರೆ ಅಷ್ಟೆ. ಪಕ್ಷಕ್ಕೆ ದಕ್ಕೆ ಆಗಬಾರದು ಅನ್ನೊ ನಿಟ್ಟಿನಲ್ಲಿ ಭೇಟಿ. ಸಿಎಂ ಚರ್ಚೆ ವಿಚಾರಕ್ಕೆ ತೆರೆ ಹೆಳೆಯೋದಕ್ಕೆ ಭೇಟಿ ಎಂದರು.
ನಮಗಿಂತ ವಿರೋಧ ಪಕ್ಷದವರೇ ಹೆಚ್ಚು ಚರ್ಚೆ ಮಾಡ್ತಿದ್ದಾರೆ. ನಮ್ಮ ಪಾರ್ಟಿ ತೀರ್ಮಾನ ವಿರೋಧ ಪಕ್ಷಕ್ಕೆ ಏನು ಸಂಬಂಧ? 140 ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಯಾವುದೇ ಅನುಮಾನ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಈ ಚರ್ಚೆ ಬೇಡ ತೆರೆ ಎಳೆಯಿರಿ ಅನ್ನೋದಕ್ಕೆ ಕೆಲವರು ಹೋಗಿದ್ದಾರೆ. ಡಿಕೆಶಿ ಅವರಿಗೆ ಸಿಎಂ ಕೊಡಬೇಕು ಅನ್ನೋ ಬೇಡಿಕೆ ಇದೆ. ಭವಿಷ್ಯದಲ್ಲಿ ಪಕ್ಷ ಸಂಘಟಿಸುವ ದೃಷ್ಟಿಯಿಂದ ಅವಕಾಶ ಕೊಡಬೇಕು ಎಂದರು.
ಸಿದ್ದರಾಮಯ್ಯ ಅವರ ಆಡಳಿತ, ನಾಯಕತ್ವದ ಬಗ್ಗೆ ಯಾರು ಪ್ರಶ್ನೆ ಮಾಡ್ತಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕು. ನಮಗೆ ಸಾಕಷ್ಟು ಮಾಡಲು ಕೆಲಸ ಇದೆ. ಸುಮ್ಮನೆ ನಿತ್ಯ ಇದೇ ಚರ್ಚೆ ಅವಶ್ಯಕತೆ ಇಲ್ಲ. ನಾವು ಅಭಿವೃದ್ಧಿ ಬಗ್ಗೆ ಗಮನ ಕೊಡೋದು ಹೇಗೆ? ಕಾಂಗ್ರೆಸ್ ಪಕ್ಷ ಸಂಘಟನೆಗೆ ಮಾಡ್ಕೊಂಡು ಬಂದಿದ್ದಾರೆ.ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. 2028ಕ್ಕೆ ನಮ್ಮ ಸರ್ಕಾರ ಬರಬೇಕು ಎಚ್ಚೆತ್ತು ನಾವು ಕೆಲಸ ಮಾಡಬೇಕು ಎಂದರು.
ವಿರೋಧ ಪಕ್ಷದವರು ಬಾಯಿಗೆ ಬಂದಾಗೆ ಮಾತ್ನಾಡ್ತಾರೆ. ನಮ್ಮ ಪಕ್ಷ ಸಂಘಟನೆ ಮಾಡಬೇಕು. ಬೇರೆಯವರ ಬಾಯಿಗೆ ತುತ್ತಾಗಬಾರದು. ಡಿಕೆಶಿ ಸಿಎಂ ಹೈಕಾಮಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ದ. ಎರಡೂವರೆ ವರ್ಷ ಬದಲಾವಣೆ ಅನ್ನೋ ಮಾತುಕತೆ ನಮಗೆ ಗೊತ್ತಿಲ್ಲ. ಮಾತು ಕೊಟ್ಟಿದ್ರೆ ಉಳಿಸಿಕೊಳ್ಳಬೇಕು ಕೊಟ್ಟ ಮಾತಿಗೆ ತಪ್ಪಬಾರದು. ಹೈಕಮಾಂಡ್ ಮಾತು ಕೊಟ್ಟಿದ್ರೆ ಉಳಿಸಿಕೊಳ್ಳಲಿ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಬಿಡಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ನಾಯಕರೇ ಪರ ವಿರೋಧ ಬರಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡ್ತೇವೆ. ಅಭಿಮಾನ ಇಬ್ಬರ ಮೇಲು ಇರುತ್ತೆ. ಅಂತಿಮವಾಗಿ ಪಕ್ಷದ ನಿರ್ಧಾರವೇ ಅಂತಿಮ ನಿರ್ಧಾರ ಮಾಡಲಿದೆ. ಯಾರ ಯಾರ ಅತ್ರ ಶಕ್ತಿ ಏನು ಅಂತ ನೊಡ್ತಿದ್ದಾರೆ. ಇಲ್ಲಿ ಸಂಖ್ಯೆ ಆಧಾರದ ಮೇಲೆ ನಿರ್ಧಾರ ಆಗಲ್ಲ. ಸಿದ್ದರಾಮಯ್ಯ ಅವರಿಗೆ ವರ್ಚಸ್, ಅವರದೇ ಓಟ್ ಬ್ಯಾಂಕ್ ಇತ್ತು ನೋಡಿ ಅವರ ಅನುಭವದ ಮೇಲೆ ಅವಕಾಶ ಕೊಟ್ಟರು. ಮುಂದೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದಾಗಿ ಹೇಳಿದರು.
ವರದಿ: ಗಿರೀಶ್ ರಾಜ್, ಮಂಡ್ಯ








