Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 32,950 ಮಂದಿ ಭೇಟಿ

15/01/2026 9:34 PM

11 ತಿಂಗಳಲ್ಲಿ ₹4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

15/01/2026 9:25 PM

ಚಿತ್ರದುರ್ಗ: ಹಿರಿಯೂರು ನಗರ ಠಾಣೆಯ ಪೊಲೀಸರಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಸವಾರ ಅರೆಸ್ಟ್

15/01/2026 9:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `ಬಾಲ್ಯವಿವಾಹ’ ಮಾಡಿದರೆ 1 ಲಕ್ಷ ರೂ.ದಂಡದ ಜೊತೆಗೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!
KARNATAKA

ALERT : ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `ಬಾಲ್ಯವಿವಾಹ’ ಮಾಡಿದರೆ 1 ಲಕ್ಷ ರೂ.ದಂಡದ ಜೊತೆಗೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!

By kannadanewsnow5720/11/2025 8:00 AM

ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ, ಅಪೌಷ್ಠಿಕ ವಿಕಲಾಂಗ ಮಗುವಿನ ಜನನ, ಗರ್ಭಪಾತ ಹಾಗೂ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವ್ಹಿ.ಪಿ. ಶಿವಾನಂದ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕುಕನೂರು ವಿದ್ಯಾನಂದ ಗುರುಕುಲ ಪಿ.ಯು.ಸಿ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾನಂದ ಗುರುಕುಲ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ದಂದು ಬಾಲ್ಯವಿವಾಹ ನಿಷೇಧ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಎಂಬ ವಿಷಯದ ಕುರಿತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು, ಸಾಂಕ್ರಾಮಿಕ ಮತ್ತ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಆರೋಗ್ಯ ಇಲಾಖೆಗಳ ಯೋಜನೆಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಲಾಗುತ್ತದೆ. ಬಾಲ್ಯವಿವಾಹ ಸಮಾಜದ ಒಂದು ಪಿಡುಗು. ಸರ್ಕಾರ ನಿಗಧಿಪಡಿಸಿದ ಸರಿಯಾದ ವಯಸ್ಸಿಗೆ ಮದುವೆ ಮಾಡಬೇಕು. ಮಕ್ಕಳ ಬಾಲ್ಯವನ್ನು ಅವರಿಗೆ ಅನುಭವಿಸಲು ಬೀಡಬೇಕು. 2006ರ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯವಿವಾಹ ಮಾಡಿದರೆ ಅಂತವರಿಗೆ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೇ ಹಾಗೂ ರೂ.1 ಲಕ್ಷ ದಂಡ ವಿಧಿಸಲಾಗುತ್ತದೆ. ಬಾಲ್ಯವಿವಾಹ ಮಾಡಲು ಪಾಲಕರಲ್ಲಿರುವ ಮೂಡನಂಬಿಕೆ, ಅನಕ್ಷರತೆ, ಆಸ್ತಿ ಉಳಿಸಿಕೊಳ್ಳುವಿಕೆ ಮುಂತಾದ ಕಾರಣಗಳಿಂದ ಬಾಲ್ಯವಿವಾಹ ನಡೆಯುತ್ತವೆ. ಆದ್ದರಿಂದ ಗ್ರಾಮದಲ್ಲಿ ಯಾರೂ ಬಾಲ್ಯವಿವಾಹ ಮಾಡದಂತೆ ಜಾಗೃತ ವಹಿಸಬೇಕು. ಎಲ್ಲರೂ ಸೇರಿ “ಬಾಲ್ಯ ವಿವಾಹ ಮುಕ್ತ ಜಿಲ್ಲೆ”ಯನ್ನಾಗಿ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪಿ. ಅವರು ತಾಯಿ-ಮಕ್ಕಳ ಆರೋಗ್ಯ ರಕ್ಷಣೆ ಕುರಿತು, ಸೋಂಕಿತ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್‌ಗುನ್ಯ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗಗಳ ನಿಯಂತ್ರಣ ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಉತ್ತಮ ಜೀವನ ಶೈಲಿಯ ಆಹಾರ ಸೇವನೆ ಮತ್ತು ಆರೋಗಕರ ಅಭ್ಯಾಸಗಳು ಕುರಿತು ವಿವರವಾಗಿ ಮಾತನಾಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಕಾಳಪ್ಪ ಅವರು ಮಾನಸಿಕ ಆರೋಗ್ಯ, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ, ಹಾವು ಕಡಿತ ನಿಯಂತ್ರಣ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕುಕನೂರು ವಿದ್ಯಾನಂದ ಗುರುಕುಲ ಪಿ.ಯು.ಸಿ ಕಾಲೇಜಿನ ಪ್ರಾಚಾರ್ಯರ ಪಾಂಡುರಂಗ ಎನ್, ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನ ಕಾರಿಯಾಗಿವೆ. ಜೊತೆಗೆ ವಿವಿಧ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ್ತ ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ 6 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಕು.ಮೌನೇಶ್ ಬಿ ಪ್ರಥಮ, ಕುಮಾರಿ. ಲಕ್ಷ್ಮೀ ಬಾವಿಕಟ್ಟಿ ದ್ವಿತಿಯ ಹಾಗೂ ಕು.ಶ್ರೀನಿವಾಸ ತೃತಿಯ ಬಹುಮಾನಗಳನ್ನು ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಆರ್.ಕೆ.ಎಸ್.ಕೆ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಮಹೆಬೂಬ್, ಸಹಉಪನ್ಯಾಸಕರಾದ ಆರ್.ಕೆ ಪಾಟೇಲ್, ಎಸ್.ಸಿ ಹಳ್ಳಿಗುಡಿ, ನರೇಂದ್ರ ರಾಠೋಡ್, ಹರಿಪ್ರೀಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಪ್ತಸಮಾಲೋಚಕರು ಸೇರಿದಂತೆ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ALERT: Public beware: 2 years in prison along with a fine of Rs. 1 lakh for committing 'child marriage' in the state!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 32,950 ಮಂದಿ ಭೇಟಿ

15/01/2026 9:34 PM1 Min Read

11 ತಿಂಗಳಲ್ಲಿ ₹4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

15/01/2026 9:25 PM3 Mins Read

ಚಿತ್ರದುರ್ಗ: ಹಿರಿಯೂರು ನಗರ ಠಾಣೆಯ ಪೊಲೀಸರಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಸವಾರ ಅರೆಸ್ಟ್

15/01/2026 9:09 PM1 Min Read
Recent News

ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 32,950 ಮಂದಿ ಭೇಟಿ

15/01/2026 9:34 PM

11 ತಿಂಗಳಲ್ಲಿ ₹4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

15/01/2026 9:25 PM

ಚಿತ್ರದುರ್ಗ: ಹಿರಿಯೂರು ನಗರ ಠಾಣೆಯ ಪೊಲೀಸರಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಸವಾರ ಅರೆಸ್ಟ್

15/01/2026 9:09 PM

BREAKING: ತಾಯಿ ಜೊತೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದ ಮಚ್ಚಿನೇಟು, ಮಾರಣಾಂತಿಕ ಹಲ್ಲೆ

15/01/2026 8:53 PM
State News
KARNATAKA

ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 32,950 ಮಂದಿ ಭೇಟಿ

By kannadanewsnow0915/01/2026 9:34 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ಫ್ಲವರ್ ಶೋ ನಡೆಯುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 32,950 ಮಂದಿ…

11 ತಿಂಗಳಲ್ಲಿ ₹4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

15/01/2026 9:25 PM

ಚಿತ್ರದುರ್ಗ: ಹಿರಿಯೂರು ನಗರ ಠಾಣೆಯ ಪೊಲೀಸರಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಸವಾರ ಅರೆಸ್ಟ್

15/01/2026 9:09 PM

BREAKING: ತಾಯಿ ಜೊತೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದ ಮಚ್ಚಿನೇಟು, ಮಾರಣಾಂತಿಕ ಹಲ್ಲೆ

15/01/2026 8:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.