ಶಿವಮೊಗ್ಗ: ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಪೋಕ್ಸೋ, ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿಯಾಗಿದ್ದಂತ ದೂಗೂರು ಪರಮೇಶ್ವರ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ಸಾಗರದ ಪೇಟೆ ಠಾಣೆಯಲ್ಲಿ ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಕುಮಾರ್, ದೂಗೂರು ಪರಮೇಶ್ವರ್ ಸೇರಿದಂತೆ 9 ಮಂದಿ ವಿರುದ್ಧ ಪೋಕ್ಸೋ, ಭ್ರೂಣಹತ್ಯೆ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಆರೋಪಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೇ ಎ2 ಆರೋಪಿ ಕುಮಾರ್, ಎ3 ಆರೋಪಿ ದೂಗೂರು ಪರಮೇಶ್ವರ್ ಸೇರಿದಂತೆ ಇತರರು ನಾಪತ್ತೆಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಂತ ಸಾಗರ ಪೇಟೆ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇಂದು ಎ.3 ಆರೋಪಿಯಾಗಿದ್ದಂತ ದೂಗೂರು ಪರಮೇಶ್ವರ್ ಅವರು ಬೆಂಗಳೂರಲ್ಲಿ ಇರುವಂತ ಖಚಿತ ಮಾಹಿತಿ ಸಾಗರ ಪೇಟೆ ಠಾಣೆಯ ಪೊಲೀಸರಿಗೆ ಸಿಕ್ಕಿತ್ತು ಎನ್ನಲಾಗಿದೆ. ಈ ಸುಳಿವು ಆಧರಿಸಿ ಬೆಂಗಳೂರಿಗೆ ತೆರಳಿದ್ದಂತ ಕ್ರೈಂ ಪೊಲೀಸರ ತಂಡವು, ಪೋಕ್ಸೋ, ಭ್ರೂಣಹತ್ಯೆ ಪ್ರಕರಣದ ಆರೋಪಿ ದೂಗೂರು ಪರಮೇಶ್ವರ್ ಬಂಧಿಸಿರೋದಾಗಿ ಹೇಳಲಾಗುತ್ತಿದೆ.
ಬೆಂಗಳೂರಲ್ಲಿ ಆರೋಪಿ ದೂಗೂರು ಪರಮೇಶ್ವರ್ ಅವರನ್ನು ಬಂಧಿಸಿರುವಂತ ಸಾಗರ ಪೇಟೆ ಠಾಣೆಯ ಪೊಲೀಸರು, ಸಾಗರಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೇ ಈ ಬಗ್ಗೆ ಪೊಲೀಸರು ಮಾಹಿತಿಯನ್ನು ನೀಡಿದಾಗಲೇ ಪೋಕ್ಸೋ ಹಾಗೂ ಭ್ರೂಣಹತ್ಯೆ ಕೇಸಲ್ಲಿ ಎ3 ಆರೋಪಿ ದೂಗೂರು ಪರಮೇಶ್ವರ್ ಅವರನ್ನು ಬಂಧಿಸಿದ್ಯೋ ಅಥವಾ ಇಲ್ಲವೋ ಎಂಬುದು ಖಚಿತವಾಗಲಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ‘ಸಹಕಾರಿ ಸಂಸ್ಥೆ’ ಉಳಿಸಿಕೊಳ್ಳದಿದ್ದರೇ ರೈತರ ಬದುಕೇ ಬರಡು – ಶಾಸಕ ಗೋಪಾಲಕೃಷ್ಣ ಬೇಳೂರು
ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ








