Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಆಪರೇಷನ್ ಸಿಂದೂರ್’ ವಾರ್ಷಿಕೋತ್ಸವ: ಎಕ್ಸ್ ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ | Operation Sindoor Anniversary

07/05/2026 9:32 AM

SHOCKING : ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಪಿ ಪತಿ.!

07/05/2026 9:30 AM

BIG NEWS: ಇಂದು ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ | Actor Vijay oath

07/05/2026 9:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ‘ಸಹಕಾರಿ ಸಂಸ್ಥೆ’ ಉಳಿಸಿಕೊಳ್ಳದಿದ್ದರೇ ರೈತರ ಬದುಕೇ ಬರಡು – ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಶಿವಮೊಗ್ಗ: ‘ಸಹಕಾರಿ ಸಂಸ್ಥೆ’ ಉಳಿಸಿಕೊಳ್ಳದಿದ್ದರೇ ರೈತರ ಬದುಕೇ ಬರಡು – ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0918/11/2025 4:22 PM

ಶಿವಮೊಗ್ಗ : ಸಹಕಾರಿ ಸಂಸ್ಥೆಗಳಿಗೆ ನಂಬಿಕೆ ಜೀವಾಳ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ರಕ್ಷಣೆ ಮಾಡಬೇಕು. ರೈತರ ಮೊಗದಲ್ಲಿ ಸಂತಸವಿದ್ದಾಗ ಮಾತ್ರ ದೇಶ ಸುಭೀಕ್ಷವಾಗಿರುತ್ತದೆ. ಒಂದು ವೇಳೆ ಸಹಕಾರಿ ಸಂಸ್ಥೆಗಳನ್ನು ಉಳಿಸಿಕೊಳ್ಳದಿದ್ದರೇ ರೈತರ ಬದುಕೇ ಬರಡಾಗಲಿದೆ ಎಂಬುದಾಗಿ ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಮಹಾಮಂಡಲ ಸೇರಿ ವಿವಿಧ ಸಹಕಾರಿ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಪ್ರಪಂಚದಲ್ಲಿ ಭಾರತ ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಶಕ್ತವಾಗಿದೆ. ರಾಜ್ಯದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಂ. 1 ಸ್ಥಾನ ಗಳಿಸಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಸಂಸ್ಥೆ ಅತಿಹೆಚ್ಚು ಲಾಭ ಗಳಿಸುತ್ತಿದೆ. ತಾಲ್ಲೂಕಿನಲ್ಲಿ ಅನೇಕ ಸಹಕಾರಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ನಿರ್ಮಾಣ, ರಿಪೇರಿಗೆ ಡಿಸಿಸಿ ಬ್ಯಾಂಕ್‌ನಿಂದ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಅನುದಾನದಲ್ಲಿ ಸಹಕಾರಿ ಸಂಸ್ಥೆಗಳ ಕಟ್ಟಡಕ್ಕೆ ಅನುದಾನ ನೀಡಲಾಗುತ್ತಿದೆ. ಈಗಾಗಲೆ ಆನಂದಪುರ ಬ್ಯಾಕೋಡು, ನಂದಿತೆಳೆ, ಕೆಳದಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಎರಡು ತಿಂಗಳು ಆಗಿತ್ತು. ಆಗ ಕಲ್ಮನೆ ಸೊಸೈಟಿಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತು. ರೈತರು ತೀವೃ ಸಂಕಷ್ಟದಲ್ಲಿದ್ದಾಗ ಡಿಸಿಸಿ ಬ್ಯಾಂಕ್‌ನಿoದ 3.50 ಕೋಟಿ ರೂ. ಸಾಲಸೌಲಭ್ಯವನ್ನು ರೈತರಿಗೆ ನೀಡಿ ಅವರ ಬದುಕು ಹಸನುಗೊಳಿಸುವ ಕೆಲಸ ಮಾಡಲಾಗಿದೆ. ರೈತರು ಸಹಕಾರಿ ಸಂಸ್ಥೆಗಳ ಮೂಲಕ ತಮ್ಮ ಫಸಲು ಮಾರಾಟ ಮಾಡಬೇಕು. ಜೊತೆಗೆ ಖಾಸಗಿ ಫೈನಾನ್ಸ್ಗಳಲ್ಲಿ ಹಣ ತೊಡಗಿಸುವ ಬದಲು ನಿಮ್ಮ ಸಮೀಪದ ಸಹಕಾರಿ ಸಂಸ್ಥೆಗಳಲ್ಲಿ ಹಣ ತೊಡಗಿಸಿ ಎಂದು ಸಲಹೆ ನೀಡಿದರು.

ರೈತರ ಸಂಪರ್ಕಕ್ಕಾಗಿ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಸಹಕಾರಿ ಕ್ಷೇತ್ರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಹಕಾರಿ ಸಂಘಗಗಳ ಕಟ್ಟಡ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸುವಂತ ಕೆಲಸವನ್ನು ಮಾಡಿದ್ದೇನೆ. ರಾಜಕೀಯ ಹೊರತಾಗಿಯೂ ಸಹಕಾರಿ ಸಂಸ್ಥೆಗಳಿಗೆ ನೆರವಾಗುತ್ತಿರುವುದಾಗಿ ತಿಳಿಸಿದರು.

ಸಾಗರ ತಾಲ್ಲೂಕಿನ ಕರೂರು ಭಾರಂಗಿ ಹೋಬಳಿಯಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕೆ ರೋಗ ಬಂದಿರುವುದರಿoದ ರೈತರು ತೀವೃ ನಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ರೈತರ ಸಂಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮoಜುನಾಥ ಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ನೆಹರುರವರು ಸಹಕಾರಿ ಸಂಸ್ಥೆಗಳನ್ನು ಬಲಿಷ್ಠ ಗೊಳಿಸಬೇಕು ಆರ್ಥಿಕ ಸಬಲೀಕರಣಕ್ಕೆ ಅದು ಬಹು ಮುಖ್ಯವಾದದ್ದು ಎಂಬುದನ್ನು ಪ್ರತಿಪಾದಿಸಿದರು, ದೇಶಾದ್ಯಂತ 8.45 ಲಕ್ಷ ಸಹಕಾರಿ ಸಂಸ್ಥೆಗಳಿದ್ದು, 40 ಕೋಟಿಗೂ ಹೆಚ್ಚು ಸಹಕಾರಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ರಿಂದ 70ಸಾವಿರ ಸಹಕಾರಿ ಸದಸ್ಯರು ಇದ್ದಾರೆ. ಸಹಕಾರಿ ಚಳುವಳಿ ಜನರ ಚಳುವಳಿಯಾಗಿದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗಬಾರದು. 2013ರ ನಂತರ ಸಹಕಾರಿ ಕ್ಷೇತ್ರವನ್ನು ಸರ್ಕಾರಗಳು ವ್ಯಾಪಿಸಿಕೊಳ್ಳುವ ಪ್ರಯತ್ನ ನಡೆಸಿವೆ. ಜಿಲ್ಲೆಯಲ್ಲಿ ರೈತರಿಗೆ 1300 ಕೋಟಿ ರೂ. ಬೆಳೆಸಾಲವನ್ನು ನೀಡಲಾಗಿದೆ. ಸಾವಯವ ಹೆಸರಿನಲ್ಲಿ ಯೂರಿಯಾ ಬೆರೆಸಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರ ಮಣ್ಣು ಸಾಯುತ್ತಿದೆ. ಮಣ್ಣು ಸತ್ತು ಹೋದರೆ ನಾವೆಲ್ಲಿಗೆ ಹೋಗಬೇಕು ಎನ್ನುವ ಚಿಂತನೆ ಅಗತ್ಯ. ರೈತರು ತೋಟಗಳಿಗೆ ಕೊಟ್ಟಿಗೆ ಹಾಗೂ ಸೆಗಣಿ ಗೊಬ್ಬರ ಬಳಕೆ ಮಾಡಬೇಕು. ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯ್ತಿ ಸಹಕಾರಿ ಸಂಸ್ಥೆಯೊoದನ್ನು ಆಯ್ದುಕೊಂಡು ಅದನ್ನು ಸಹಕಾರಿ ಗ್ರಾಮವಾಗಿ ರೂಪಿಸುವ ಯೋಜನೆ ಜಾರಿಯಲ್ಲಿದ್ದು, ಈ ಬಗ್ಗೆ ಶಾಸಕರು ಸ್ಥಳೀಯರು ಗಮನ ಹರಿಸಬೇಕು ಸಹಕಾರಿ ಸಂಸ್ಥೆಗಳು ಬರಿ ನಾಮಪಾಲಕಕ್ಕೆ ಸೀಮಿತವಾಗದೆ ತನ್ನ ಪ್ರಮುಖ ಉದ್ದೇಶವನ್ನು ಪೂರೈಸಬೇಕು ಎಂದು ಹೇಳಿದರು.

ಸಾಗರ ತಾಲೂಕಿನಲ್ಲಿ ಸಹಕಾರಿ ಸಂಘಟನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದವರು ತೋಟಗಾರಸ ಸಂಸ್ಥೆಯ ಅಧ್ಯಕ್ಷರಾದ ಕೆ ಸಿ ದ್ಯಾವಪ್ಪನವರ ಕಾರ್ಯ ವೈಖರಿಯನ್ನು ಸ್ಥಾಪಿಸಿ ಸಭೆಯಲ್ಲಿ ಪ್ರಸ್ತಾಪಿಸಿದರು ಅಂತೆಯೇ ಸಾಗರದಲ್ಲಿ ಸಾಕಷ್ಟು ಸಹಕಾರಿ ಸಂಸ್ಥೆಗಳು ಮಾದರಿಯಾಗಿ ಮುನ್ನಡೆದಿದೆ ಎಂದರು.

ಸಹಕಾರಿ ಯೂನಿಯನ್ ಅಧ್ಯಕ್ಷ ಅಮೃತೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಇಲಾಖೆಯ ರೋಹಿಣಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿಮುಲ್ ಅಧ್ಯಕ್ಷ ವಿದ್ಯಾಧರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಬಿ.ಎ.ಇಂದೂಧರ ಬೇಸೂರು, ಕೃಷ್ಣಮೂರ್ತಿ ಭಂಡಾರಿ, ಜಿ.ಎನ್.ಸುಧೀರ್, ತಿಮ್ಮಪ್ಪ, ಭರ್ಮಪ್ಪ, ಕೆ.ಸಿ.ದೇವಪ್ಪ, ಆರ್.ಶ್ರೀನಿವಾಸ್, ಅಶೋಕ ಬೇಳೂರು, ಲೋಕನಾಥ ಬಿಳಿಸಿರಿ, ಗಣಪತಿ ಹೊನಗಲು, ಲೋಕೇಶ ಕುಮಾರ್, ಈಶ್ವರ ನಾಯ್ಕ್, ನೇತ್ರಾವತಿ ಜಿ. ಭಟ. ಸುಧಾ . ಚಂದ್ರಶೇಖರ್. ದಿನೇಶ್ ಬರದವಳ್ಳಿ, ಸಂತೋಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

BREAKING: ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ ಹಿನ್ನಲೆ: ಉತ್ತರ ಕನ್ನಡದ NH-52 ಕಂಚಿನ ಬಾಗಿಲು ಬಳಿಯಲ್ಲಿ 1 ಕಿ.ಮೀ ನಿಷೇಧಾಜ್ಞೆ

ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ

Share. Facebook Twitter LinkedIn WhatsApp Email

Related Posts

SHOCKING : ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಪಿ ಪತಿ.!

07/05/2026 9:30 AM1 Min Read

ವಯಸ್ಸಿನ ಆಧಾರದ ಯಾರು ಎಷ್ಟು ಕಿಲೋಮೀಟರ್ ನಡೆಯಬೇಕು? ಇಲ್ಲಿದೆ ಮಾಹಿತಿ 

07/05/2026 9:17 AM2 Mins Read

SHOCKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಆಸ್ಪತ್ರೆಯಲ್ಲಿಯೇ ವಿಧವೆ ಮಹಿಳೆ ಮೇಲೆ ನೌಕರನಿಂದ ಅತ್ಯಾಚಾರ.!

07/05/2026 9:10 AM1 Min Read
Recent News

​’ಆಪರೇಷನ್ ಸಿಂದೂರ್’ ವಾರ್ಷಿಕೋತ್ಸವ: ಎಕ್ಸ್ ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ | Operation Sindoor Anniversary

07/05/2026 9:32 AM

SHOCKING : ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಪಿ ಪತಿ.!

07/05/2026 9:30 AM

BIG NEWS: ಇಂದು ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ | Actor Vijay oath

07/05/2026 9:24 AM

SHOCKING : ಜಗತ್ತಿಗೆ ಕಾಲಿಟ್ಟ ಮತ್ತೊಂದು ಮಹಾಮಾರಿ ವೈರಸ್ : `ಹ್ಯಾಂಟವೈರಸ್‌’ಗೆ ಮೂವರು ಬಲಿ.!

07/05/2026 9:22 AM
State News
KARNATAKA

SHOCKING : ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಪಿ ಪತಿ.!

By kannadanewsnow5707/05/2026 9:30 AM KARNATAKA 1 Min Read

ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಅನುಮಾನದ ಎಂಬ ವಿಷಬೀಜ ಮೊಳೆದಾಗ, ಆ ಸಂಸಾರ ಸ್ಮಶಾನವಾಗುತ್ತದೆ ಎಂಬುದಕ್ಕೆ ಆಂಧ್ರಪ್ರದೇಶದ ಸೂರ್ಯಾಪೇಟೆ ಜಿಲ್ಲೆಯ…

ವಯಸ್ಸಿನ ಆಧಾರದ ಯಾರು ಎಷ್ಟು ಕಿಲೋಮೀಟರ್ ನಡೆಯಬೇಕು? ಇಲ್ಲಿದೆ ಮಾಹಿತಿ 

07/05/2026 9:17 AM

SHOCKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಆಸ್ಪತ್ರೆಯಲ್ಲಿಯೇ ವಿಧವೆ ಮಹಿಳೆ ಮೇಲೆ ನೌಕರನಿಂದ ಅತ್ಯಾಚಾರ.!

07/05/2026 9:10 AM

ಇನ್ಮುಂದೆ `ಆಧಾರ್ ಕಾರ್ಡ್ ಅಪ್‌ ಡೇಟ್’ ಇನ್ನಷ್ಟು ಸುಲಭ ; ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ!

07/05/2026 8:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.