ಹಾವೇರಿ : ಹಾವೇರಿಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿಗೆ ನವಜಾತ ಶಿಶು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಕೆಳಗೆ ಬಿದ್ದು ಪೆಟ್ಟಾದ ಹಿನ್ನೆಲೆ ಮಗು ಮೃತಪಟ್ಟಿದೆ ಎನ್ನಲಾಗಿದೆ. ಹೆರಿಗೆ ಬಂದ ಮಹಿಳೆಗೆ ಆರೈಕೆ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.
ಹೌದು ಹೆರಿಗೆ ಎಂದು ಮಹಿಳೆ ಆಸ್ಪತ್ರೆಗೆ ಬಂದಾಗ ಸಿಬ್ಬಂದಿಗಳು ಹಾಗೂ ವೈದ್ಯರು ಮಹಿಳೆಯನ್ನು ನೋಡದೆ ನಿರ್ಲಕ್ಷ ಬಯಸಿದ್ದಾರೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದರು. ಗರ್ಭಿಣಿ ಮಹಿಳೆಯ ಆರೈಕೆ ಮಾಡುವುದು ಬಿಟ್ಟು ಸಿಬ್ಬಂದಿಗಳು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ವೈದ್ಯರು, ನರ್ಸ್ ಗಳು ಯಾರೂ ಅವರ ಆರೈಕೆ ಮಾಡಲಿಲ್ಲ. ಮಹಿಳೆಗೆ ಮೊದಲೇ ಬೆಡ್ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ. ಎಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಗೆ ಬೆಡ್ ಕೊಡದೇ 1 ಗಂಟೆ ನೆಲದ ಮೇಲೆ ಕೂರಿಸಿದ್ದಾರೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ. ಶೌಚಾಲಯ ಎಲ್ಲಿದೆ ಅಂತ ಅಕ್ಕಪಕ್ಕದವರನ್ನು ಕೇಳಿಕೊಂಡು ಮಹಿಳೆ ಶೌಚಾಲಯಕ್ಕೆ ಹೋಗಿದ್ದು, ಆಗ ಮಹಿಳೆಗೆ ಹೆರಿಗೆ ಆಗಿದೆ. ಪರಿಣಾಮ ಮಗು ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಮಗು ಕಣ್ಣು ಬಿಡುವಷ್ಟರಲ್ಲೇ ಮೃತಪಟ್ಟಿದೆ. ಸಿಬ್ಬಂದಿಗಳು ಮತ್ತು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು, ಸ್ಥಳಕ್ಕೆ ಪೊಲೀಸರು ಬಂದು ಮೃತ ಮಹಿಳೆಯ ಕುಟುಂಬಸ್ಥರ ಮನವೊಲಿಸಿದ್ದಾರೆ.








