ಮೈಸೂರು : ವ್ಯಕ್ತಿಯ ಮೇಲೆ ಕೆ ಆರ್ ನಗರ ಶಾಸಕ ರವಿಶಂಕರ್ ಹಲ್ಲೆ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕರು ಹೊಡೆದಿಲ್ಲ ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕರೆದು ಕೂರಿಸಿದ್ದಾರೆ ಎಂದು ಶಾಸಕರಿಂದ ಹೊಡೆಸಿಕೊಂಡ ಎನ್ನಲಾದ ವ್ಯಕ್ತಿ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ಕೆ ಆರ್ ನಗರದ ಮಹದೇವ್ ಎನ್ನುವವರು ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದು ಎಂದು ಸಭೆಯಲ್ಲಿ ನಾನು ಡೈರಿ ವಿಚಾರವಾಗಿ ಸಮಸ್ಯೆ ಹೇಳುತ್ತಿದ್ದೆ ಬೇರೆಯವರು ಬೇರೆ ಬೇರೆ ಸಮಸ್ಯೆ ಹೇಳುತ್ತಿದ್ದರು ಎಲ್ಲವೂ ಗೊಂದಲಮಯವಾಗಿತ್ತು ಶಾಸಕರಿಗೆ ಏನು ಕೇಳಿಸುತ್ತಿರಲಿಲ್ಲ. ನಾನು ಪಕ್ಕದಲ್ಲಿ ನಿಂತಿದ್ದೆ ಆಗ ನನಗೆ ಬೆನ್ನು ತಟ್ಟಿ ಕುಳಿತುಕೊಳ್ಳಲು ಹೇಳಿದರು. ಯಾವುದೇ ಹಲ್ಲೆ ಮಾಡಿಲ್ಲ ಅದು ಸತ್ಯಕ್ಕೆ ದೂರವಾದ ಆರೋಪ ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕೂರಿಸಿದ್ದನ್ನ ಬಿಟ್ಟರೆ ಯಾವಾಗಲಾಟೆಯು ಆಗಿಲ್ಲ ಎಂದು ಹಲ್ಲಿಗೆ ಒಳಗಾದ ಮಹದೇವ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಮೈಸೂರು ಜಿಲ್ಲೆಯ ಕೆಆರ್ ನಗರ ಶಾಸಕ ರವಿಶಂಕರ್ ಅವರು ಗ್ರಾಮ ಒಂದರಲ್ಲಿ ಕುಂದು ಕೊರತೆ ಸಮಸ್ಯೆ ಆಲಿಸಲು ತೆರಳಿದ್ದರು. ಈ ವೇಳೆ ವ್ಯಕ್ತಿ ಒಬ್ಬರು ಡೈರಿ ಸಮಸ್ಯೆ ಕುರಿತು ಹೇಳುತ್ತಿದ್ದಾಗ ಅವರ ಮೇಲೆ ಶಾಸಕ ರವಿಶಂಕರ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರಿಂದ ಜನರು ಚುನಾವಣೆ ವೇಳೆ ಕೈಕಾಲು ಹಿಡಿದು ಮತ ಕೇಳುತ್ತಾರೆ ಆದರೆ ಈಗ ಹಲ್ಲೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ ಇದೀಗ ಹಲ್ಲೆಗೆ ಒಳಗಾದಂತಹ ಎನ್ನಲಾದ ವ್ಯಕ್ತಿ ಸ್ಪಷ್ಟನೆ ನೀಡಿದ್ದು ಶಾಸಕರು ಯಾವುದೇ ಹಲ್ಲೆ ಮಾಡಿಲ್ಲ ಗಲಾಟೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.








