ಶಿವಮೊಗ್ಗ: ಸಾಗರದ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಸಾಗರ ತಾಲ್ಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ದಿನಾಂಕ 18-11-2025ರ ಮಂಗಳವಾರದಂದು ಸಾಗರದ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸುವಂತ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿಯ ಕಾರಣ ವಿದ್ಯುತ್ ಕಂಬ ಸ್ಥಳಾಂತರದಿಂದಾಗಿ ನಾಳೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿನೋಬನಗರ, ಮಂಕಳೆ, ನೆಹರುನಗರ, ಅರಳೀಕೊಪ್ಪ, ಜನ್ನತ್ ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಜೋಸೆಫ್ ನಗರ, ಬಿಹೆಚ್ ರಸ್ತೆಗಳಲ್ಲಿ ಕರೆಂಟ್ ಇರೋದಿಲ್ಲ ಎಂದಿದೆ.
ಇದಲ್ಲದೇ ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್ಐಸಿ ಆಫೀಸ್ ಹತ್ತಿರ, ಸೊರಬ ಮಾರ್ಕೆಟ್ ರಸ್ತೆ, ತಿಲಕ್ ರಸ್ತೆ, ಶ್ರೀ ಟಾಕೀಸ್ ರೋಡ್, ಜೆಸಿ ರಸ್ತೆ, ಗಾಂಧಿನಗರ, ವಿಜಯನಗರ, ಬಿಕೆ ರಸ್ತೆ, ರಾಮನಗರ, ಹೆಗಡೆ ಫಾರಂ, ಎಸ್ ಎನ್ ನಗರ, ಕಂಬಳಿಕೊಪ್ಪ, ಚಿಪ್ಳಿ, ಆಧಿಶಕ್ತಿ ನಗರ, ಯಲಗಳಲೆ ಇಂಡಸ್ಟ್ರೀಯಲ್ ಏರಿಯಾ ವ್ಯಾಪ್ತಿಯ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG BREAKING: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ | Sheikh Hasina Verdict








