ಬೆಂಗಳೂರು : ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲಾಟೆ ನಡೆದಿದೆ. ಚಾಲಕರಾದ ಸುಹೇಲ್ ಮತ್ತು ಜಗದೀಶ್ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಚಾಕು ಹಿಡಿದು ಸುಹೇಲ್ ಅಟ್ಟಹಾಸ ಮೆರೆದಿದ್ದಾನೆ. ಚಾಲಕ ಸುಹೇಲ್ ಮತ್ತೋರ್ವ ಚಾಲಕ ಜಗದೀಶ್ ಅನ್ನು ಅಟ್ಟಾಡಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣ ಸುಹೇಲ್ ನನ್ನ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಕಪ್ ಚಾಲಕರ ಹಾವಳಿ ಮಿತಿಮೀರಿದೆ. ಸೈಡ್ ಪಿಕಪ್ ಕಿಂಗ್ ಪಿನ್ ಗಳ ನಡುವೆ ನಿತ್ಯವೂ ಗಲಾಟೆ ನಡೆಯುತ್ತಲೇ ಇರುತ್ತದೆ. ಸೈಡ್ ಪಿಕಪ್ ಹಾವಳಿಗೆ ಪೊಲೀಸರು ಬ್ರೇಕ್ ಹಾಕದಿದ್ದರಿಂದ ಗಲಾಟೆಗಳು ನಡೆಯುತ್ತಿವೆ ಎಂದು ಏರ್ಪೋರ್ಟ್ ಪೊಲೀಸರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.








