ಉತ್ತರಕನ್ನಡ : ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೊಕಿನ ಕುಡ್ಲೆ ಬೀಚ್ನಲ್ಲಿ ಈ ಒಂದು ಘಟನೆ ನಡೆದಿದೆ.
ಕುಡ್ಲೆ ಬೀಚ್ನಲ್ಲಿ ಕಜಕಿಸ್ತಾನ ಮೂಲದ ಐದಾಲಿ (25) ಎನ್ನುವ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. ಐದಾಲಿ ಸಮುದ್ರದಲ್ಲಿ ಈಜಲು ತೆರಳಿದ್ದಾಗ ಅಲೆಗೆ ಸಿಲುಕಿದ್ದಾನೆ. ಮಂಜುನಾಥ ಹರಿಕನ್ತ್ರ, ಗಿರೀಶ್ ಗೌಡ ಹಾಗೂ ನಾಗೇಂದ್ರ ಎನ್ನುವವರು ವಿದೇಶ ಪ್ರಜೆಯನ್ನು ರಕ್ಷಿಸಿದ್ದಾರೆ. ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








