ಹುಬ್ಬಳ್ಳಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತವಾಗಿ ಸಾವನ್ನಪ್ಪಿದ ಎಎಸ್ಐಯೋರ್ವರು ಸಾವನ್ನಪ್ಪಿದ್ದು, ಅವರು ತಮ್ಮ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ಭಾನುವಾರ(ನ.16) ಬೆಳಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿ ಸುಚರಾಯು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು. ತಮ್ಮವರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಕೂಡ ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ.








