ದಾವಣಗೆರೆ : ದಾವಣಗೆರೆಯಲ್ಲಿ ಘೋರ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ರೋಟವೇಟರ್ ಯಂತ್ರಕ್ಕೆ ಸಿಲುಕಿ ರೈತ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ದಿದ್ದಿಗಿ ಗ್ರಾಮದ ನಾರಪ್ಪ (30) ರೋಟವೇಟರ್ ಯಂತ್ರ ಸಿಲುಕಿ ಸಾವನಪ್ಪಿರುವ ರೈತ ಎಂದು ತಿಳಿದು ಬಂದಿದೆ.
ಎಂದಿನಂತೆ ರೈತ ನಾರಪ್ಪ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ರೋಟವೇಟರ್ ಹೊಡೆಸುತ್ತಿದ್ದರು. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರೈತ ನಾರಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಏಕಾಏಕಿ ಆತನ ಮೇಲೆ ರೋಟವೇಟರ್ ಯಂತ್ರ ಹರಿದಿದೆ. ಪರಿಣಾಮ ರೋಟವೇಟರ್ಗೆ ಸಿಕ್ಕ ರೈತನ ದೇಹ ಛಿದ್ರವಾಗಿದೆ.
ತಕ್ಷಣವೇ ಟ್ರ್ಯಾಕ್ಟರ್ ನಿಲ್ಲಿಸಿ ನೋಡಿದಾಗ ಸ್ಥಳದಲ್ಲೇ ರೈತ ನಾರಪ್ಪ ಕೊನೆಯುಸಿರೆಳೆದಿದ್ದರು. ಮನೆಗೆ ಆಧಾರವಾಗಿದ್ದ ರೈತ ನಾರಪ್ಪನನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಹತ್ತಿರದ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








