ಬೆಂಗಳೂರು : ಡೇಟಿಂಗ್ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಪ್ರೇಮಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬಂದಿದ್ದರನ್ನು ಕವಿಪ್ರಿಯ ಹಾಗೂ ಹರ್ಷವರ್ಧನ ಎಂದು ತಿಳಿದು ಬಂದಿದೆ. ಆಪ್ ಗಳ ಮೂಲಕ ಇಬ್ಬರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು ಸಾಲ ತೀರಿಸಲು ಆಗದೆ ಪ್ಲಾನ್ ಮಾಡಿ ಡೇಟಿಂಗ್ ಆಪ್ ಮೂಲಕ ವಂಚನೆ ಎಸಗುತ್ತಿದ್ದರು.
ಹ್ಯಾಪನ್ ಆಪ್ ನಲ್ಲಿ ಫೋಟೋ ಹಾಕಿ ಯುವಕರಿಗೆ ಬಲೆ ಬೀಸುತ್ತಿದ್ದರು ಪ್ರಿಯಕರ ಪ್ಲಾನ್ ಅಂತ ಕವಿಪ್ರಿಯಾಳಿಂದ ಯುವಕರಿಗೆ ಬಲೆ ಹಾಕಲಾಗುತ್ತಿತ್ತು. ಯುವಕರ ಭೇಟಿಯ ಬಳಿಕ ಚಿನ್ನ ನಗದು ದೋಚಿ ಪರಾರಿ ಆಗುತ್ತಿದ್ದರು. ನವೆಂಬರ್ ಒಂದರಂದು ಓರ್ವ ಯುವಕನನ್ನು ಲಾಡ್ಜ್ ಗೆ ಕರೆದು ಆತನಿಗೆ ಪ್ರಜ್ಞೆ ತಪ್ಪಿಸಿ ಆತನ ಬಳಿ ಇರುವ ಚಿನ್ನ ನಗದು ಹಣ ದೋಚಿ ಪರಾರಿಯಾಗಿದ್ದಳು.
ನವೆಂಬರ್ 1 ರಂದು ಬೆಂಗಳೂರಿನ ಇಂದಿರಾನಗರದ ಲಾಡ್ಜ್ ಒಂದಕ್ಕೆ ಕವಿಪ್ರಿಯ ಯುವಕನನ್ನು ಕರೆಸಿದ್ದಾಳೆ. ಅಲ್ಲಿ ಇಬ್ಬರು ಕಂಟಪೂರ್ತಿ ಕುಡಿದಿದ್ದಾರೆ. ಬಳಿಕ ಆಕೆ ಆನ್ಲೈನ್ ನಲ್ಲಿ ಊಟ ತರಿಸಿದ್ದಾಳೆ. ನಂತರ ನೀರಿನಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಹಾಕಿ ಯುವಕನಿಗೆ ಪ್ರಜ್ಞೆ ತಪ್ಪಿಸಿದ್ದಾಳೆ. ಬಳಿಕ ಆತನ ಬಳಿ ಇರುವ ಚಿನ್ನಾಭರಣ ಹಣ ದೋಚಿ ಕವಿಪ್ರಿಯಾ ಪರಾರಿಯಾಗಿದ್ದಾಳೆ. ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








