ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಮಿಕ್ಸರ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಗದಗ ಎಮ್.ಜಿ.ಆರ್.ಡಿ.ಪಿ.ಆರ್ ವಿಶ್ವ ವಿದ್ಯಾಲಯ ಬಳಿ ನಡೆದಿದೆ.
9 ವರ್ಷದ ಮನೋಜ್ ಕಮತರ ಹಾಗೂ 18 ವರ್ಷದ ಆನಂದ ವಾರದ ಮೃತ ಯುವಕರು. ಮೃತರು ಗದಗ ತಾಲೂಕಿನ ನಾಗಾವಿಯ ಗ್ರಾಮದ ನಿವಾಸಿಗಳು ಎನ್ನಲಾಗಿದೆ.ಮೃತರು ಗದಗ ಜಿಮ್ಸ್ ನಿಂದ ನಾಗಾವಿ ಗ್ರಾಮಕ್ಕೆ ಹೊರಟಿದ್ದರು. ಅತಿಯಾದ ವೇಗದಲ್ಲಿ ಓವರ್ ಟೆಕ್ ಮಾಡುವ ವೇಳೆ ಎದುರು ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಹೊಡೆದಿದ್ದಾರೆ. ಗದಗ ಟು ಹೊನ್ನಳ್ಳಿ-57 ರಾಜ್ಯ ಹೆದ್ದಾರಿ ಇದಾಗಿದ್ದು, ನಾಗಾವಿ ಬಳಿಯ ಮಹಾತ್ಮ ಗಾಂಧಿ ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯದ ಗೇಟ್ ಬಳಿ ಅಪಘಾತ ನಡೆದಿದೆ.








