ಬೆಂಗಳೂರು : ಬೆಂಗಳೂರಲ್ಲಿ ಮತ್ತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, 6.5 ಕೋಟಿ ರು. ಮೌಲ್ಯದ ಹೈಡೋ ಗಾಂಜಾ ಜಪ್ತಿ ಮಾಡಿದ್ದಾರೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆದಿದ್ದು, ಬ್ಯಾಂಕಾಕ್‌ನಿಂದ ಕೆಐಎಗೆ ಬಂದಿಳಿದ ಮೂವರನ್ನು ಸೆರೆಹಿಡಿದು 6.5 ಕೋಟಿ ರು. ಮೌಲ್ಯದ ಗಾಂಜಾ ವಶಪಡಿ ಸಿಕೊಂಡಿದ್ದಾರೆ. ಕಳೆದ ಎರಡು ವಾರಗಳಿಂದಕೆಐಎನಲ್ಲಿಡ್ರಗ್ಸ್ ದಂಧೆಕೋರರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ನಿರಂತರ ವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
2 ಇದುವರೆಗೆ 10ಕ್ಕೂ ಹೆಚ್ಚಿನ ಪೆಡ್ಡರ್‌ಗಳು ಸಿಕ್ಕಿಬಿದ್ದು 60 ಕೋಟಿ ರು. ಹೈಡೋ ಗಾಂಜಾ ಜಪ್ತಿಯಾಗಿದೆ. ಬ್ಯಾಂಕಾಂಕ್ ನಿಂದ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಕಣ್ಣು ತಪ್ಪಿಸಿ ಗಾಂಜಾ ಸಾಗಾಣಿಕೆಗೆ ಡ್ರಗ್ಸ್ ಜಾಲ ಯತ್ನಿಸಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಬ್ಯಾಂಕಾಂಗ್‌ನಿಂದ ಬಂದಿಳಿಯುವ ಪ್ರಯಾಣಿಕರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ಆಗಮಿಸಿದ ಪ್ರಯಾಣಿಕ ನಿಂದ 96.60 ಲಕ್ಷ ರು. ಮೌಲ್ಯದ 2.769 ಕೆಜಿ ಗಾಂಜಾ ಹೈಡೋ ಗಾಂಜಾ ಸಿಕ್ಕಿದೆ. ಮರುದಿನ ಬಂದಿಳಿದ ಮತ್ತಿಬ್ಬರಿಂದ 5.53 ಕೋಟಿ ಬೆಲೆಯ 15.79 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.








