ಪಾಟ್ನಾ : ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಶುರವಾಗಿದೆ.
ಮೊದಲು ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಮಹಾಘಟಬಂಧನ್ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಹೆಚ್ಚಿನ ರಾಷ್ಟ್ರೀಯ ಸಂಸ್ಥೆಗಳು ಎನ್ಡಿಎಗೆ ಸ್ಪಷ್ಟ ಮುನ್ನಡೆ ನೀಡಿವೆ. ಹಲವಾರು ಸಮೀಕ್ಷೆಗಳು ಎನ್ಡಿಎ ಬಹುಮತದ ಗಡಿ ದಾಟಲಿದೆ ಎಂದು ತೋರಿಸಿವೆ. ಮಹಾ ಮೈತ್ರಿಕೂಟ (ಆರ್ಜೆಡಿ-ಕಾಂಗ್ರೆಸ್-ಎಡ) ಹಿಂದುಳಿದಿದೆ ಎಂದು ಅಂದಾಜಿಸಲಾಗಿದೆ. ಬಿಹಾರದ ಪ್ರಾದೇಶಿಕ ಅಸಮಾನತೆಯಿಂದಾಗಿ, ಫಲಿತಾಂಶಗಳು ಬದಲಾಗಬಹುದು. ಪಶ್ಚಿಮ ಬಿಹಾರವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.








