ಕಲಬುರ್ಗಿ: ದಿನಾಂಕ 16-11-2025ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹಾಗೂ ಕಾರ್ಯಕ್ರಮಕ್ಕೆ ಷರತ್ತು ಬದ್ಧ ಅನುಮತಿಯನ್ನು ನೀಡಿ ತಹಶೀಲ್ದಾರ್ ಅಧಿಕೃತ ಆದೇಶ ಮಾಡಿದ್ದಾರೆ.
ಈ ಕುರಿತಂತೆ ಚಿತ್ತಾಪೂರ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಅನುಮತಿಸಿ ಪತ್ರದಲ್ಲಿ ಆದೇಶ ಮಾಡಿದ್ದು, ಚಿತ್ತಾಪೂರ ಪಟ್ಟಣದಲ್ಲಿ ಆರ್,ಎಸ್,ಎಸ್ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಉಲ್ಲೇಖ (1) ರನ್‌ವಯ ಅಶೋಕ ಪಾಟೀಲ ರವರು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಹಾಗೂ ಮಾನ್ಯ ಉಚ್ಚ ನ್ಯಾಯಲಯ ಕಲಬುರಗಿ ಪೀಠದಲ್ಲಿ WP NO. 203166/2025 ರ ಪ್ರಕರಣ ದಾಖಲಿಸಿರುತ್ತಾರೆ. ಮಾನ್ಯ ನ್ಯಾಯಾಲಯದ ನಿರ್ದೇಶನದಂತೆ ದಿನಾಂಕ: 28-10-2025 ರಂದು ಶಾಂತಿ ಸಭೆ ನಡೆಸಲಾಗಿರುತ್ತದೆ. ಹಾಗೂ ದಿನಾಂಕ: 30-10-2025 ರಂದು ಮಾನ್ಯ ಉಚ್ಚ ನ್ಯಾಯಲಯ ಕಲಬುರಗಿ ಪೀಠದಲ್ಲಿ ನೀಡಿದ ನಿರ್ದೇಶನದಂತೆ ದಿನಾಂಕ: 05-11-2025 ರಂದು ಮಾನ್ಯ ಅಡ್ವಕೇಟ್ ಜನರಲ್ ಬೆಂಗಳೂರು ರವರ ಕಛೇರಿಯಲ್ಲಿ ಮತ್ತೊಮ್ಮೆ ಶಾಂತಿ ಸಭೆಯನ್ನು ಅರ್ಜಿದಾರರು ಮತ್ತು ಅವರ ವಕೀಲರ ಜೊತೆ ನಡೆಸಲಾಯಿತು. ಮಾನ್ಯ ನ್ಯಾಯಲಯದ ನಿರ್ದೇಶನದಂತೆ ಹಾಗೂ ಶಾಂತಿ ಸಭೆಯಲ್ಲಿ ಚರ್ಚಿಸಿದಂತೆ ಸದರಿ ಕಾರ್ಯಕ್ರಮದ ಕುರಿತು ಕ್ರಮ ವಹಿಸಬೇಕಾಗಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು, ಕಲಬುರಗಿ ಇವರ ಪತ್ರದಂತೆ ಪೊಲೀಸ್ ವೃತ್ತ ನಿರೀಕ್ಷಕರು ಚಿತ್ತಾಪೂರ ಇವರಿಂದ ವರದಿ ಕೋರಲಾಗಿ, ಉಲ್ಲೇಖ (3) ರನ್ವಯ ಪೊಲೀಸ್ ವೃತ್ತ ನಿರೀಕ್ಷಕರು ಚಿತ್ತಾಪೂರ ರವರು ಕಾರ್ಯಕ್ರಮದ ಕುರಿತು ಅಭಿಪ್ರಾಯದೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ. ಪುಯುಕ್ತ ಅರ್ಜಿದಾರರಿಗೆ ಚಿತ್ತಾಪೂರ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸ್ ವೃತ್ತ ನಿರೀಕ್ಷಕರು ಚಿತ್ತಾಪೂರ ರವರ ವರದಿಯನ್ನಾಧರಿಸಿ ಅನುಮತಿ ನೀಡುವ ಕುರಿತು ಈ ಕೆಳಕೆಂಡ ಆದೇಶಿಸಿದ್ದಾರೆ.
ಪೀಠಿಕೆಯಲ್ಲಿ ವಿವರಿಸಿದಂತೆ ಉಲ್ಲೇಖ (1) ರನ್ವಯ ಅರ್ಜಿದಾರರಾದ ಶ್ರೀ ಅಶೋಕ ಪಾಟೀಲ ರವರು ಚಿತ್ತಾಪೂರ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಲು ಕೋರಿದ ಮನವಿ ಹಾಗೂ ಉಲ್ಲೇಖ (3) ರನ್ವಯ ಪೊಲೀಸ್ ವೃತ್ತ ನಿರೀಕ್ಷಕರು ಚಿತ್ತಾಪೂರ ರವರ ವರದಿಯನ್ನಾಧರಿಸಿ ದಿನಾಂಕ: 16.11.2025 ರಂದು ಮಧ್ಯಾಹ್ನ 3-00 ಗಂಟೆಯಿಂದ ಸಂಜೆ 5-30 ರವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿದ್ದಾರೆ.
1) ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಗರಿಷ್ಟ 300 ಜನರಿಗೆ ಸಿಮಿತಗೊಳಿಸಲಾಗಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಯಂ ಸೇವಕರು ಚಿತ್ತಾಪೂರ ಕಂದಾಯ ತಾಲೂಕಿನವರಾಗಿರಬೇಕು.
2) ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ 25 ಜನರಿಗೆ ಮಾತ್ರ ಬ್ಯಾಂಡ್ ನೊಂದಿಗೆ ಹಾಜರಾಗಲು ಅವಕಾಶವಿದೆ.
3) ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಕಾರ್ಯಕ್ರಮ ನಡೆಸುವ ಒಂದು ದಿನದ ಮೊದಲು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು.
4) ಪಥಸಂಚಲನ ಹಾಗೂ ಕಾರ್ಯಕ್ರಮವನ್ನು 2025 ನೇ ನವೆಂಬರ್ 16 ನೇ ದಿನಾಂಕದಂದು ಮಧ್ಯಾಹ್ನ 3-00 ಗಂಟೆಯಿಂದ ಸಂಜೆ 5-30 ರ ನಡುವೆ ನಡೆಸಿ ಪೂರ್ಣಗೊಳಿಸಬೇಕು ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
5) ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಗಳಾದ ಬಜಾಜ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕ ಪಂಚಾಯತ ಕಾರ್ಯಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ಸರ್ಕಲದಿಂದ ಮರಳಿ ಬಜಾಜ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥ ಸಂಚಲನ ಕೈಗೊಳ್ಳುವುದು. ಬೇರೆ ಯಾವುದೇ ಮಾರ್ಗಗಳನ್ನು ಬಳಸುವಂತಿಲ್ಲ.
6) ಈ ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿಯೇ ಕಟ್ಟು ನಿಟ್ಟಾಗಿ ನಡೆಸಬೇಕು ಮತ್ತು ಮಾರ್ಗ ನಕ್ಷೆ ಪುಕಾರ ಕಾರ್ಯಕ್ರಮ ಹೊರತು ಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳು/ಬೀದಿಗಳಲ್ಲಿ ಯಾವುದೇ ಭಾಷಣಗಳು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು.
7) ಕಾರ್ಯಕ್ರಮದ ಆಯೋಜಕರು, ಭಾಗವಹಿಸುವವರು, ಆಹ್ವಾನಿತರು ಯಾವುದೇ ರಾಜಕೀಯ ಭಾಷಣಗಳನ್ನು ಮಾಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಭಾಷೆ ಅಥವಾ ಘೋಷಣೆಗಳನ್ನು ಬಳಸಬಾರದು.
8) ಈ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳುವ ಮತ್ತು ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದಂತೆ ನೋಡಿಕೊಳ್ಳುವ ಹತ್ತು ಜನ ವ್ಯಕ್ತಿಗಳು/ನಾಯಕರು/ಸಂಘಟಕರ ಪಟ್ಟಿಯನ್ನು ಅವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಪೊಲೀಸ್ ಇಲಾಖೆಗೆ ನೀಡಬೇಕು.
9) ಧ್ವಜಗಳು, ಬ್ಯಾನರ್‌ಗಳು, ಬಂಟಿಂಗ್‌ಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಹಾಗೂ ಬ್ಯಾನರ ಮತ್ತು ಬಂಟಿಂಗ್‌ಗಳಲ್ಲಿ ಯಾವುದೇ ಪುಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು.
10) ಸಮಾರಂಭದ ಆಯೋಜಕರು ಹಾಗೂ ಭಾಗವಹಿಸವವರು ಕಾರ್ಯಕ್ರಮಕ್ಕೆ ಸಂಭಂದಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು.
ಪ್ರಸ್ತುತ ಅನುಮತಿಯನ್ನು ಒಂದು ಬಾರಿಯ ಕ್ರಮವಾಗಿ ಮಾತ್ರ ನೀಡಲಾಗಿದೆ. ಗೌರವಾನ್ವಿತ ಉಚ್ಚ ನ್ಯಾಯಲಯ ಕಲಬುರಗಿ ಪೀಠದಲ್ಲಿ ದಾಖಲಾದ WP NO : 203166/2025 ರಲ್ಲಿ ದಿನಾಂಕ: 24-10-2025 ಮತ್ತು 30-10-2025 ರಂದು ಜರುಗಿದ ವಿಚಾರಣೆಯ ದಿನಗಳಂದು ನೀಡಿದ ನಿರ್ದೇಶನದ ಪ್ರಕಾರ, ಕಾರ್ಯಕ್ರಮದ ಆಯೋಜಕರು ಮತ್ತು ಜಿಲ್ಲಾಡಳಿತದ ನಡುವೆ ನಡೆದ ಶಾಂತಿ ಸಭೆಯಲ್ಲಿನ ಚರ್ಚೆಯ ಅನುಸಾರ ನೀಡಲಾಗುತ್ತಿದೆ. ಈ ಅನುಮತಿಯನ್ನು ಬೇರೆ ಪ್ರಕರಣಗಳಿಗೆ ಪೂರ್ವ ನಿದರ್ಶನವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಸದರಿ ಆದೇಶವನ್ನು ಸಂಬಂದಪಟ್ಟ, ಪಕ್ಷಗಾರರ ಯಾವುದೇ ಕಾನೂನು ಹಕ್ಕುಗಳು ಅಥವಾ ಹಕ್ಕುಗಳ ಮೇಲಿನ ತೀರ್ಪು ಎಂದು ಪರಿಗಣಿಸಲಾಗುವುದಿಲ್ಲವೆಂದು ತಿಳಿಸಿದ್ದಾರೆ.

BREAKING: 10, 12 ನೇ ತರಗತಿ 2026ರ ಬೋರ್ಡ್ ಪರೀಕ್ಷೆಗೆ ದಿನಾಂಕ ಪ್ರಕಟಿಸಿದ CBSE | ICSE, ISC Exam
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








