ದಾವಣಗೆರೆ : ಸೈಬರ್ ಅಪರಾಧ ಲೋಕದ ಅತಿ ದೊಡ್ಡ ಸ್ಟೋರಿಗೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ ಎರಡು ತಿಂಗಳಲ್ಲಿ ಸೈಬರ್ ವಂಚಕನ ಅಕೌಂಟ್ ನಲ್ಲಿ 150 ಕೋಟಿ ರೂಪಾಯಿ ವಹಿವಾಟ ಸಂಬಂಧ ಗುಜರಾತಿನ ಅಹಮದಾಬಾದ್ ಮೂಲದ ಸಂಜಯ್ ಕುಂಟ್ ಎನ್ನುವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ವಿಚಾರಣೆಯ ವೇಳೆ ಕರೆಂಟ್ ಅಕೌಂಟ್ ಗಳ ಮಾರಾಟ ದಂಧೆ ಬಯಲಾಗಿದೆ.
ದಾವಣಗೆರೆಯ ಪ್ರಮೋದ್ ಎಂಬಾತ ಸೈಬರ್ ವಂಚಕರಿಂದ 52 ಲಕ್ಷ ರೂ. ಕಳೆದು ಕೊಂಡಿದ್ದೇನೆಂದು ಆ.29 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದ ದಾವಣಗೆರೆ ಸೆನ್ ಪೊಲೀಸರಿಗೆ ಬಗೆದಷ್ಟು ಸ್ಪೋಟಕ ಮಾಹಿತಿ ಸಿಗುತ್ತಿದೆ. ಈಗ ದೂರು ಕೊಟ್ಟ ಪ್ರಮೋದ್ ಸಹ ಸೈಬರ್ ವಂಚನೆಯ ಗ್ಯಾಂಗ್ ಸದಸ್ಯ ಎಂಬುದು ಗೊತ್ತಾಗಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಅಲ್ಲದೇ ಸಂಜಯ್ ವಿಚಾರಣೆ ವೇಳೆ ಕರೆಂಟ್ ಅಕೌಂಟ್ ಗಳ ಮಾರಾಟ ದಂಧೆ ಬದಲಾಗಿದ್ದು, ಉದ್ಯಮ ಇಲ್ಲದಿದ್ದರೂ ಬ್ಯಾಂಕ್ ಸೊಸೈಟಿಗಳಲ್ಲಿ ಕರೆಂಟ್ ಅಕೌಂಟ್ ಓಪನ್ ಮಾಡಿದ್ದರು. ಕಮಿಷನ್ ಆಸೆಗೆ ಹಣವನ್ನು ಅಕೌಂಟ್ ಹೋಲ್ಡರ್ ವಂಚಕರ ಕೈಗೆ ನೀಡುತ್ತಿದ್ದರು. ಪ್ರಕರಣದಲ್ಲಿ ದೂರುದಾರನು ಭಾಗಿಯಾಗಿರುವುದರ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. 52 ಲಕ್ಷ 60,000 ಹಣ ಕಳೆದುಕೊಂಡಿದ್ದರ ಬಗ್ಗೆ ಪ್ರಮೋದ್ ದೂರು ನೀಡಿದ್ದ. ಆದರೆ ಪ್ರಮೋದ ಸಹ ಸೈಬರ್ ವಂಚಕರ ಗ್ಯಾಂಗ್ ಸದಸ್ಯನಾಗಿದ್ದಾನೆ. ಪ್ರಮೋದ್ ರೊಚ್ಚಿಗೆದ್ದು ಅಕೌಂಟ್ ಹ್ಯಾಕ್ ಆಗಿದೆ ಎಂದು ದೂರು ನೀಡಿದ್ದ.
ತನಿಖೆ ವೇಳೆ ಆತನ ಖಾತೆಗೆ ಬಂದಿದ್ದು ಅನಾಮಧೇಯರ ಹಣ ಎಂಬುದು ಪತ್ತೆಯಾಗಿದೆ. ತನಿಖೆಯ ವೇಳೆ ಕರೆಂಟ್ ಅಕೌಂಟ್ ಗಳ ಮಾರಾಟದಂದೆ ಬಯಲಾಗಿದೆ. ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆದು ವೈವಾಟು ನಡೆಸುತ್ತಿದ್ದರು. ದುಬೈಯಿಂದ ಕರೆಂಟ್ ಅಕೌಂಟಿಗೆ ಕೋಟಿ ಕೋಟಿ ಹಣ ಜಮೆ ಆಗುತ್ತಿತ್ತು. ಆನ್ಲೈನ್ ಗೆ ಗ್ಯಾಂಬಲಿಂಗ್ ಟ್ರೇಡಿಂಗ್ ಸೇರಿದಂತೆ ಇದ್ದರೆ ಹಣ ಜಮೆ ಆಗುತ್ತಿತ್ತು. ಕರೆಂಟ್ ಅಕೌಂಟ್ ಖಾತೆಯನ್ನು ಬೇರೆಯವರಿಗೆ ಪ್ರಮೋದ್ ಮಾರಾಟ ಮಾಡಿದ್ದ ಜಮೆಯಾದ ಹಣಕ್ಕೆ ಕಮಿಷನ್ ನೀಡಿಲ್ಲ ಎಂದು ಪ್ರಮೋದ ದೂರು ನೀಡಿದ್ದಾನೆ, ತನ್ನ ಅಕೌಂಟ್ ನಲ್ಲಿ ಇದ್ದಂತಹ ಹಣವನ್ನು ವಂಚಕರು ಕದ್ದಿದ್ದಾರೆ ಎಂದು ದೂರ ನೀಡಿದ್ದಾನೆ. ಆದರೆ ಸೈಬರ್ ವಂಚಕರ ಗ್ಯಾಂಗಿನ ಸದಸ್ಯ ಪ್ರಮೋದ್ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕಮಿಷನ್ ಆಸೆಗೆ ಪ್ರಮೋದ್ ಕೂಡ ವಂಚಕರ ಕೈಗೆ ಅಕೌಂಟ್ ಡಿಟೇಲ್ಸ್ ನೀಡುತ್ತಿದ್ದ. ಅಂಜನಾದ್ರಿ ಕನ್ಸ್ಟ್ರಕ್ಷನ್ಸ್ ಹೆಸರಲ್ಲಿ ಬ್ಯುಸಿನೆಸ್ ಮಾಡುತ್ತಿರೋದಾಗಿ ಪ್ರಮೋದ್ ಹೇಳಿದ್ದು, ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆದು ಆನ್‍ಲೈನ್ ಗೇಮ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್ ಮಾಡುತ್ತಿದ್ದ. ದುಬೈನಿಂದ ಇವರ ಕರೆಂಟ್ ಅಕೌಂಟ್‍ಗೆ ಕೋಟಿ ಕೋಟಿ ಹಣ ಜಮೆ ಆಗುತ್ತಿತ್ತು. ಅಲ್ಲದೇ ದೂರುದಾರ ಪ್ರಮೋದ್ ಕೂಡ ತನ್ನ ಕರೆಂಟ್ ಅಕೌಂಟ್ ಖಾತೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದ, ಅಕೌಂಟ್‍ನಲ್ಲಿ ಜಮೆ ಆದ ಹಣಕ್ಕೆ ಕಮಿಷನ್ ನೀಡಿಲ್ಲ ಎಂದು ಆಕ್ರೋಶ ಗೊಂಡಿದ್ದ ಪ್ರಮೋದ್. ತನ್ನ ಅಕೌಂಟ್‍ನಲ್ಲಿ ಇದ್ದ ಹಣ ವಂಚಕರು ಕದ್ದಿದ್ದಾರೆ ಎಂದು ದೂರು ನೀಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.








