ಬೆಂಗಳೂರು : ‘EPFO’ ಸೊಸೈಟಿಯಲ್ಲಿ 70 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಅಂಜನಾಪುರದಲ್ಲಿರುವ ಅಕೌಂಟೆಂಟ್ ಜಗದೀಶ್ ಮನೆ ದಾಳಿ ಮಾಡಲಾಗಿದೆ. ಜಗದೀಶ್ ಮನೆ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ ಹಲವು ದಾಖಲೆಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಹಲವಾರು ಖಾಸಗಿ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಮಾರು 20ಕ್ಕೂ ಹೆಚ್ಚು ಚೆಕ್ ಬುಕ್ 15ಕ್ಕೂ ಹೆಚ್ಚು ಎಟಿಎಂ ಕಾರ್ಡ್ ಗಳು ಪತ್ತೆಯಾಗಿದೆ. ಅಲ್ಲದೇ 10 ಎಕರೆಗೂ ಹೆಚ್ಚಿನ ಜಮೀನು ಪತ್ರ ಕೂಡ ಪತ್ತೆಯಾಗಿದೆ. ಜಗದೀಶ್ ಮತ್ತು ಪತ್ನಿ ಹೆಸರಲ್ಲಿ ಇರುವ ಜಮೀನು ಪತ್ರ ದೊರೆತಿದೆ.
ದಾಳಿಯ ವೇಳೆ 4 BMW ಸೇರಿ 12 ಕಾರು 7 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಕರಣವನ್ನು ಡಿಜಿ & ಐಜಿಪಿ CID ಗೆ ವರ್ಗಾವಣೆ ಮಾಡಿದ್ದಾರೆ. ಇಂದು ಕೇಸ್ ಫೈಲ್ CID ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಇದುವರೆಗೂ ನಡೆದಿರುವ ತನಿಖೆಯ ಮಾಹಿತಿ ಹಾಗು ಕೇಸ್ ಫೈಲ್ ಅನ್ನು ಕಬ್ಬನ್ ಪಾರ್ಕ್ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.








