ನವದೆಹಲಿ : ಕಳೆದ ಕೆಲವು ದಿನಗಳ ಹಿಂದೆ ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಪ್ರಕರಣ ನಡೆದ ಬೆನ್ನಲ್ಲೆ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ ಮಹಿಪಾಲಪುರ ರಾಡಿಸನ್ ಹೋಟೆಲ್ ಬಳಿ ಸ್ಪೋಟ ಸಂಭವಿಸಿದೆ.
ಬೆಳಿಗ್ಗೆ 9.18ರ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿದೆ. ಸ್ಪೋಟದ ಸದ್ದಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಮೊದಲು ಸ್ಪೋಟದ ಪರಿಣಾಮ 12 ಜನರು ಸಾವನ್ನಪ್ಪಿದ್ದು 17 ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಇಂದು ಬೆಳಿಗ್ಗೆ ಮತ್ತೊಂದು ಸ್ಫೋಟ ಸಂಭವಿಸಿದ್ದು ದೆಹಲಿಯ ಜನತೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.








