ಸೂಪರ್ ಸ್ಟಾರ್ ನಟ ಜಾಕಿ ಚಾನ್ ಸಾವನ್ನಪ್ಪಿರುವುದಾಗಿ ಫೋಟೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿನ ಸುಳ್ಳು ಹರಡುತ್ತಿದ್ದಂತೆ ಸೂಪರ್ ಸ್ಟಾರ್ ಜಾಕಿ ಚಾನ್ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಸೋಮವಾರ, ಜಾಕಿ ಚಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಚಿತ್ರವೊಂದು ವೈರಲ್ ಆಗಿತ್ತು. ಫೇಸ್ಬುಕ್ನಲ್ಲಿನ ಪೋಸ್ಟ್ನಲ್ಲಿ ಜಾಕಿ ಚಾನ್ ನಿಧನರಾಗಿದ್ದಾರೆ ಮತ್ತು ಈ ಸುದ್ದಿಯನ್ನು ಅವರ ಕುಟುಂಬ ದೃಢಪಡಿಸಿದೆ ಎಂದು ಹೇಳಲಾಗಿತ್ತು. ಆದಾಗ್ಯೂ, ಇದು ನಿಜವಲ್ಲ.
ಫೇಸ್ಬುಕ್ ಪೋಸ್ಟ್ನಲ್ಲಿ ಹೀಗೆ ಬರೆಯಲಾಗಿದೆ: “ಇಂದು, ವಿಶ್ವ ಸಿನೆಮಾದಲ್ಲಿ ನಮ್ಮೆಲ್ಲರ ಹೃದಯಗಳ ಅತ್ಯಂತ ಪ್ರೀತಿಯ ವ್ಯಕ್ತಿ ನಿಧನರಾದರು… ಯೋಗ್ಯ ನಟ, ಶ್ರೇಷ್ಠ ಕುಂಗ್ ಫೂ ಆಟಗಾರ, ತಮಾಷೆಯ ನಗುವಿನ ವ್ಯಕ್ತಿ, ಜಾಕಿ ಚಾನ್ ನಿಧನರಾದರು. ಆದರೆ ಇದು ಸುಳ್ಳು ಸುದ್ದಿಯಾಗಿದೆ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.
Thank God I checked Twitter about Jackie Chan because I was about to tweak. pic.twitter.com/Y4wpEtce14
— Noah❄️🥶 (@NoahMKE) November 10, 2025








