ಮಂಡ್ಯ : ಕನ್ನಡದ ತಿಥಿ ಸಿನಿಮಾ ಮೂಲಕ ಖ್ಯಾತಿಯಾಗಿದ್ದ ಗಡ್ಡಪ್ಪ ನಿಧನರಾಗಿದ್ದಾರೆ. ನೋದೇಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ವಿಧಿವಶರಾಗಿದ್ದಾರೆ. ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಅಂತಾನೆ ಚನ್ನೇಗೌಡ ಫೇಮಸ್ ಆಗಿದ್ದರು. ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಗಡ್ಡಪ್ಪ ಅಸ್ತಮ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ತಿಥಿ, ತರಲೇ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿದಂತೆ ಸುಮಾರು 8 ಸಿನಿಮಾಗಳಲ್ಲಿ ಚೆನ್ನೇಗೌಡ ನಟನೆ ಮಾಡಿದ್ದರು. ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಗಡ್ಡಪ್ಪ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಕೂಡ ಪೆಟ್ಟಾಗಿತ್ತು. ಸೊಂಟದ ಆಪರೇಷನ್ ಆಗಿತ್ತು ಇದೀಗ ಇಂದು ಗಡ್ಡಪ್ಪ ನಿಧನರಾಗಿದ್ದಾರೆ.








