ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದೀಗ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದ್ದು ಎಂದಿನಂತೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಟ್ವೀಟ್ ಮೂಲಕ ತಿಳಿಸಿದೆ.
ತಾಂತ್ರಿಕ ಸಮಸ್ಯೆಯನ್ನು ಬೆಳಿಗ್ಗೆ 08:47 ಗಂಟೆಗೆ ಪರಿಹರಿಸಲಾಗಿದೆ ಮತ್ತು ಹಳದಿ ಮಾರ್ಗದ ಎಲ್ಲಾ ರೈಲುಗಳು ಈಗ ಎಂದಿನಂತೆ ಸೇವೆಯಲ್ಲಿ ಇವೆ. ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಈಗ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಟ್ವೀಟ್ ನಲ್ಲಿ BMRCL ಮಾಹಿತಿ ಹಂಚಿಕೊಂಡಿದೆ.
ಇಂದು ಬೆಳಿಗ್ಗೆ ಬಿಎಂಆರ್ ಸಿಎಲ್ ಈ ಕುರಿತು ಮಾಹಿತಿ ನೀಡಿದ್ದು, ಹಳದಿ ಮಾರ್ಗದ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ, ರೈಲು ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ ತಾಂತ್ರಿಕ ಸಮಸ್ಯೆ ಪರಿಹಾರವಾಗಿದ್ದು ಎಂದಿನಂತೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ತಾಂತ್ರಿಕ ಸಮಸ್ಯೆಯನ್ನು ಬೆಳಿಗ್ಗೆ 08:47 ಗಂಟೆಗೆ ಪರಿಹರಿಸಲಾಗಿದೆ ಮತ್ತು ಹಳದಿ ಮರಗದ ಎಲ್ಲಾ ರೈಲುಗಳು ಈಗ ಎಂದಿನಂತೆ ಸೇವೆಯಲ್ಲಿ ಇವೆ. ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಈಗ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
ನಮ್ಮ ಮೆಟ್ರೋ ಪ್ರಯಾಣಿಕರ ಮಾಹಿತಿಗಾಗಿ.— ನಮ್ಮ ಮೆಟ್ರೋ (@OfficialBMRCL) November 12, 2025








