ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಜೈಶ್ ಎ ಮೊಹ್ಮಮದ್ ಉಗ್ರ ಸಂಘಟನೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಮುಜಾಮ್ಮಿಲ್, ಇಬ್ಬರು ವೈದ್ಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಡಾಕ್ಟರ್ ಶಾಹೀನ್ ಫೋಟೋ ಬರಲಾಗಿದ್ದು ವೃತ್ತಿಯಲ್ಲಿ ವೈದ್ಯ ಆಗಿದ್ದ ಶಾಹಿದ್ ಪ್ರವೃತ್ತಿಯಲ್ಲಿ ಭಯೋತ್ಪಾದಿಕೆಯಾಗಿದ್ದಾಳೆ ಈಕೆಗೆ ಜೈ ಸಂಘಟನೆಯ ಲಿಂಕ್ ಇದೆ ಎಂದು ತಿಳಿದುಬಂದಿದೆ. ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ IB, NIA, NSG & ಸ್ಥಳೀಯರ ತಂಡವನ್ನು ರಚನೆ ಮಾಡಲಾಗಿದೆ. 500 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ತಂಡದಲ್ಲಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಬಳಿ i20 ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ 9 ಜನರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಮೂವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದು ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಇನ್ನು 17 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ಮತ್ತು ಭಯೋತ್ಪಾದನಾ ವಿರೋಧಿ ತಜ್ಞರು ಕುಳಿಗಳು, ಚೂರುಚೂರುಗಳು ಅಥವಾ ಉಂಡೆಗಳ ಅನುಪಸ್ಥಿತಿಯಿಂದ ಗೊಂದಲಕ್ಕೊಳಗಾಗಿದ್ದರು – ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ಫೋಟಗಳಲ್ಲಿ ನಿರೀಕ್ಷಿಸಲಾಗುತ್ತದೆ.







