ಮೈಸೂರು : ಅನಗತ್ಯವಾಗಿ ಜನರನ್ನು ಸರ್ಕಾರಿ ಕಚೇರಿಗೆ ಅಲಸುವುದು ಅಪರಾಧ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದರೆ ಜನ ನನ್ನ ಬಳಿ ಬರುವುದು ಕಡಿಮೆ ಆಗುತ್ತೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕು ಕೇಂದ್ರಗಳಲ್ಲಿ ತಾಲೂಕು ಅಧಿಕಾರಿಗಳು ವಾಸ ಮಾಡಬೇಕು ಮೈಸೂರಿನ ಜನ ಸಮಸ್ಯೆ ಬಗ್ಗೆ ಹರಿಸಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ಜನರು ಹಗಲು ರಾತ್ರಿ ನಿನಗಾಗಿ ಕಾಯುತ್ತಾರೆ ಕಂದಾಯ ಇಲಾಖೆ ಸಂಬಂಧದ ಪರಿಹಾರಕ್ಕಾಗಿ ನನ್ನ ಬಳಿ ಬರುತ್ತಿದ್ದಾರೆ. ನಾನು ಮೈಸೂರು ಜಿಲ್ಲಾಡಳಿತಕ್ಕೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಜನರ ಸಮಸ್ಯೆ ಬಗ್ಗೆ ಹರಿಸಲು ಮುತುವರ್ಜಿ ವಹಿಸಿ ಎಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದರು.








