ದಾವಣಗೆರೆ: ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡ, ಸಾಮಾಜಿಕ ಹೋರಾಟಗಾರನ ಮೇಲೆ ಸೋಮವಾರ ಮೂವರು ಮುಸುಕುದಾರಿಗಳು ರಾತ್ರೋರಾತ್ರಿ ತಲ್ವಾರ್, ಪಂಚ್, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ದಾವಣಗೆರೆಯ ಬಾಷಾ ನಗರದಲ್ಲಿ ನಡೆದಿದೆ. ನಗರದ ಬಾಷಾ ನಗರದ ನಿವಾಸಿ ಟಿ.ಅಸ್ಟರ್‌ಮಾರಣಾಂತಿಕ ದಾಳಿಗೆ ಒಳಗಾದವರು.
ಸೋಮವಾರ ರಾತ್ರಿ ಟಿಪ್ಪು ಜಯಂತಿಯಲ್ಲಿ ಅಸ್ಟರ್ ಭಾಗವಹಿಸಿದ್ದ ವೇಳೆ ಮೂವರು ದುಷ್ಕರ್ಮಿಗಳು ಹೊಂಚು ಹಾಕಿ, ಸಂಚು ಮಾಡಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ರಾಜಿ ಪಂಚಾಯಿತಿ ವಿಚಾರವಾಗಿ ಅಸ್ಥರ್‌ಮೇಲೆ ಮೂವರು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಅಸ್ಟರ್‌ಹಾಗೂ ಖಾಲಿದ್ ಪೈಲ್ವಾನ್ ಮಧ್ಯೆ ಗಲಾಟೆಯೂ ಆಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಅಸ್ಥರ್‌ಗೆ ಖಾಲಿದ್ ಪೈಲ್ವಾನ್ ಬೆದರಿಕೆ ಹಾಕಿದ್ದು, ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕೈಗೊಂಡಿಲ್ಲ ಎಂದು ಅಸ್ಕರ್ ಕುಟುಂಬಸ್ಥರು ದೂರಿದ್ದಾರೆ.








