ತಿರುಪತಿ : ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ವೇಳೆ ಸ್ಪೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಲನ್ನೇ ಖರೀದಿಸದ ಉತ್ತರಾಖಂಡ ಮೂಲದ ಕಂಪನಿಯೊಂದು ವರ್ಷದಿಂದ ತಿರುಪತಿಗೆ 250 ಕೋಟಿ ರು. ಮೌಲ್ಯದ 68 ಲಕ್ಷ ಕೆ.ಜಿ.ಯಷ್ಟು ನಕಲಿ ತುಪ್ಪ ಪೂರೈಕೆ ಮಾಡಿತ್ತು ಎಂದು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಹೇಳಿದೆ.
ಹೌದು ನೆಲ್ಲೂರು ಕೋರ್ಟ್‌ಗೆ ಸಿಬಿಐ ಸಲ್ಲಿಸಿದ ವರದಿಯಲ್ಲಿ ಈ ಅಂಶಗಳಿವೆ. ಕಂಪನಿಗೆ ನಕಲಿ ತುಪ್ಪ ತಯಾರಿಸಲು ಬೇಕಾದ ರಾಸಾಯನಿಕಗಳನ್ನು ಪೂರೈಕೆ ಮಾಡುತ್ತಿದ್ದ ಬಂಧಿತ ಅಜಯ್ ಕುಮಾರ್ ಅಕ್ರಮದ ಕುರಿತು ಬಾಯಿಬಿಟ್ಟಿದ್ದಾನೆ. ಪಾಮಿಲ್ ಜೈನ್ ಮತ್ತು ವಿಪುಲ್ ಜೈನ್ ಎಂಬಿಬ್ಬರು ಉತ್ತರಾ ಖಂಡದ ಭಗವಾನ್‌ಪುರದಲ್ಲಿ ಭೋಲಾ ಬಾಬಾ ಆರ್ಗ್ ಯಾನಿಕ್ ಡೈರಿ ಆರಂಭಿಸಿದ್ದ ರು. ಇದು ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಗುತ್ತಿಗೆ ಪಡೆದುಕೊಂಡಿತ್ತು. ವಿಚಿತ್ರವೆಂದರೆ ಈ ಸಂಸ್ಥೆ ರೈತರಿಂದ ಒಂದೂ ಲೀಟರ್ ಹಾಲು ಖರೀದಿಸುತ್ತಿರಲಿಲ್ಲ. ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ. ತಾನೇ ತುಪ್ಪ ಉತ್ಪಾದಿಸುತ್ತಿರುವುದಾಗಿ ಹೇಳಿ ಗುತ್ತಿಗೆ ಪಡೆದುಕೊಂಡಿತ್ತು.
ನಕಲಿ ತುಪ್ಪ ತಯಾರಿಗೆ ಈ ಕಂಪನಿ ತಾಳೆ ಎಣ್ಣೆ, ಪಾಮ್ ಕೆರ್ನೆಲ್ ಆಯಿಲ್, ಹೈಡೋಜಿನೇಟೆಡ್ ಕೊಬ್ಬು, ಬೇಟಾಕೆರೋಟಿಎನ್ ಸಂಯೋಜಕಗಳನ್ನು ಬಳಸುತ್ತಿತ್ತು. ಪರಿಮಳಕ್ಕೆ ಸುಗಂಧವನ್ನು ಬಳಸಿ ನೈಜ ತುಪ್ಪವೆಂದು ಬಿಂಬಿಸುತ್ತಿತ್ತು. ತಿರುಪತಿಯಲ್ಲಿ ನಕಲಿ ತುಪ್ಪ ಪತ್ತೆಗೆಂದೇ ಆತ್ಯಾಧುನಿಕ ಯಂತ್ರಗಳಿವೆ. ಆದರೆ ಈ ವಂಚಕರು, ಕೆಲ ರಾಸಾಯನಿಗಳನ್ನು ಬಳಸಿ, ತುಪ್ಪದಲ್ಲಿನ ರೈಕರ್ಟ್ ಮೈಸಲ್ ಪ್ರಮಾಣ ಹೆಚ್ಚುವಂತೆ ಮಾಡುತ್ತಿದ್ದರು. ಹೀಗಾಗಿ ಯಂತ್ರಗಳಲ್ಲೂ ಇದು ನಕಲಿ ತುಪ್ಪವೆಂದು ಪತ್ತೆಯಾಗುತ್ತಿ ರಲಿಲ್ಲ, ಹೀಗಾಗಿ ವರ್ಷಗಳಿಂದ ಎಗ್ಗಿಲ್ಲದೆ ನಕಲಿ ತುಪ್ಪ ಪೂರೈಕೆ ಮುಂದುವರೆದಿತ್ತು.
ಬಾಬಾ ಕಂಪನಿಯನ್ನು ತುಪ್ಪ ಪೂರೈಕೆ గుత్తిగ బడియువ శియయంద ಟಿಟಿಡಿಹೊರಗೆ ಇಟ್ಟಿತ್ತು. ಆದರೂ ಆಂಧ್ರದ ವೈಷ್ಣವಿ ಡೈರಿ, ಉತ್ತರಪ್ರದೇಶದ ಮಾಲ್ ಗಂಗಾ ಡೈರಿ, ತಮಿಳುನಾಡಿನ ಎ.ಆರ್. ಡೈರಿ ಫುಡ್ ಕಂಪನಿ ಹೆಸರಿನಲ್ಲಿ ತುಪ್ಪ ಪೂರೈಕೆ ಮಾಡುವುದನ್ನು ಮುಂದುವರೆಸಿ ತ್ತು ಎಂಬುದು ತನಿಖೆಯಿಂದ ತಿಳಿದಿದೆ.








