ಬೆಂಗಳೂರು: ನಗರದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಪತಿಯೊಬ್ಬ ಪತ್ನಿ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಗಿರಿನಗರದಲ್ಲಿ ನಡೆದಿದೆ.
ಬೆಂಗಳೂರಿನ ಗಿರಿನಗರದಲ್ಲಿ ಗಗನ್ ರಾವ್ ಎಂಬುವರೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದಂತ ವ್ಯಕ್ತಿಯಾಗಿದ್ದಾರೆ. ಗಗನ್ ರಾವ್ ಅವರು ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ 8 ತಿಂಗಳ ಹಿಂದಷ್ಟೇ ಗಗನ್ ರಾವ್ ಹಾಗೂ ಮೇಘನ್ ಜಾಧವ್ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದಂತ ಸಂಸಾರವು, ಪತಿ-ಪತ್ನಿ ನಡುವೆ ಜಗಳಕ್ಕೆ ಆನಂತ್ರ ಕಾರಣವಾಗಿತ್ತು. ಪತಿ ಗಗನ್ ರಾವ್ ಗೆ ಪತ್ನಿ ಮೇಘನ ಜಾಧವ್ ಕಿರುಕುಳ ನೀಡುತ್ತಿದ್ದರಂತೆ.
ಈ ಹಿನ್ನಲೆಯಲ್ಲಿ ಪತ್ನಿ ಮೇಘನ ಜಾಧವ್ ಕಿರುಕುಳಕ್ಕೆ ಬೇಸತ್ತು ಪತಿ ಗಗನ್ ರಾವ್ ತಮ್ಮ ಗಿರಿನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಗಿರಿನಗರ ಠಾಣೆಯ ಪೊಲೀಸರು, ಮೃತನ ತಂಗಿಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾನೂನಿನಡಿ ಪಡೆದ ದತ್ತು, ಜೀವನವಿಡಿ ಸುಖದ ಸಂಪತ್ತು: ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್
BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ








