ಶಿವಮೊಗ್ಗ: ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು ಎಂಬುದಾಗಿ ಶಿವಮೊಗ್ಗ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದಂತ ತಾಜುದ್ದೀನ್ ಖಾನ್ ಅವರು ತಿಳಿಸಿದ್ದಾರೆ.
ಘಟನೆ 1.
ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಘಟನೆ ಕೆಲವು ಗಂಟೆಗಳ ಮುಂದೆ ಜನಿಸಿದ ನವಜಾತ ಹೆಣ್ಣು ಶಿಶುವಿಗೆ ರಸ್ತೆಯ ಬದಿಯಲ್ಲಿ ಗೋಣಿಚೀಲದಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡಿದ್ದರು ನಂತರ ಮಗುವಿನ ಅಳುವ ಶಬ್ದವನ್ನು ಕೇಳಿದ ಸಾರ್ವಜನಿಕರು ಚೀಲ ಬಿಚ್ಚಿ ನೋಡಿದಾಗ ಆಗ ತಾನೆ ಜನಿಸಿದ ಇರುವೆ ಮುತ್ತಿಕೊಂಡ ಮಾಂಸದ ಮುದ್ದೆ. ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದಾಗ ಮಗುವಿಗೆ ಚಿಕಿತ್ಸೆ ಕೊಡಿಸಲಾಯಿತು ಅದೃಷ್ಟವಶಾತ್ ಮಗು ಬದುಕುಳಿಯಿತು, ಜೈವಿಕ ಪೋಷಕರು ಪತ್ತೆಯಾಗದೆ ಇದ್ದಾಗ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಕಾನೂನಿನ ಪ್ರಕಾರ ಮಗುವನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಯಿತು.
ಘಟನೆ 2.
ಮದುವೆಯಾಗಿ 16 ವರ್ಷಗಳಾಗಿದ್ದು ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ದಂಪತಿಗಳು ದೂರದ ಪರಿಚಯಸ್ತರಿಗೆ ಹುಟ್ಟಿದ ಮಗುವನ್ನು ಪಡೆದು ಸಾಕುತ್ತಿದ್ದರು ಅನಧಿಕೃತವಾಗಿ ಸಾಕುತ್ತಿದ್ದ ಮಗುವಿನ ಮಾಹಿತಿ ಪಡೆದ ಅಧಿಕಾರಿಗಳು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದಾಗ ಅಧಿಕೃತವಾಗಿ ಸಾಕುತಿದನು ಗಮನಿಸಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ ದಲ್ಲಿ CARA(CENTRAL ADOPTION RESOURCE AUTHORITY) ನೊಂದಾಯಿಸಿ ಕಾನೂನು ಪ್ರಕಾರ ದತ್ತು ಪಡೆಯುವಂತೆ ತಿಳಿಸಲಾಯಿತು.
ಈ ಮೇಲಿನ ಎರಡು ಘಟನೆಗಳನ್ನು ಗಮನಿಸಿದಾಗ ಇಂತಹ ಅಪಾಯಕಾರಿ ಘಟನೆಗಳು ಮಾಹಿತಿಯ ಕೊರತೆಯಿಂದ ಪ್ರತಿನಿತ್ಯ ನಮ್ಮ ಮಧ್ಯ ನೂರಾರು ಪ್ರಕರಣಗಳು ಕಾಣುತ್ತೇವೆ ಮಕ್ಕಳಿಲ್ಲದ ದಂಪತಿಗಳು ಅನಾದಿಕೃತವಾಗಿ ಮಧ್ಯವರ್ತಿಗಳ ಮೂಲಕ ವಾಮ ಮಾರ್ಗಗಳಿಂದ ಮಕ್ಕಳನ್ನು ಪಡೆಯುವುದು ಇದು ಕಾನೂನು ಬಾಹಿರ ಅಪರಾಧವಾಗಿದೆ ಹಾಗೂ ಬೇಡವಾದ ಮಗುವನ್ನು ಕಸದ ತೊಟ್ಟಿ, ಮೋರಿ, ದೇವಸ್ಥಾನ, ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ಬಿಸಾಡುವುದು ಅಮಾನವೀಯ ಮತ್ತು ಅಪಾಯಕಾರಿ ಅಂಶವಾಗಿದ್ದು ಮಾಂಸದ ಮುದ್ದೆ ಆದ ಆ ಮಗು ಬಿಸಾಡಿದ ಸಂದರ್ಭದಲ್ಲಿ ಇರುವೆ, ಕ್ರಿಮಿಕೀಟಗಳು,ನಾಯಿಗಳ ದಾಳಿಗೆ ಪ್ರಾಣ ಕಳೆದುಕೊಳ್ಳಬಹುದು.
ಇಂಥ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಪ್ರತಿ ವರ್ಷ ನವೆಂಬರ್ ತಿಂಗಳಂದು ರಾಷ್ಟ್ರೀಯ ದತ್ತು ಮಾಸ ಆಚರಣೆ ಆಚರಿಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಕಾನೂನಿನ ಪ್ರಕಾರ ದತ್ತು ಪ್ರಕ್ರಿಯೆಗೆ ಒತ್ತು ನೀಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದತ್ತು ಮಾಸಾಚರಣೆ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ದತ್ತು ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದು 2018 ರಿಂದ 2025 ರವರಿಗೆ ಕಾನೂನು ಪ್ರಕಾರ ದೇಶಿಯ (in country) ದತ್ತು ಪ್ರಕ್ರಿಯೆಗೆ ಒಳಪಟ್ಟ ಮಕ್ಕಳ ಸಂಖ್ಯೆ 1704. ಹಾಗೂ ವಿದೇಶಿ(inter country) ದತ್ತು ಪ್ರಕ್ರಿಯೆಗಳ ಪಟ್ಟ ಮಕ್ಕಳ ಸಂಖ್ಯೆ 207 ಒಟ್ಟು 1911 ಮತ್ತು ಈ ವರ್ಷದ ಘೋಷ ವಾಕ್ಯದಂತೆ ವಿಶೇಷ ಚೇತನ ಮಕ್ಕಳಿಗೆ ದೇಶಿಯ ದತ್ತು ಪ್ರಕ್ರಿಯೆಗಳಪಟ್ಟ ಮಕ್ಕಳ ಸಂಖ್ಯೆ 21 ಹಾಗೂ ವಿದೇಶಿ ದತ್ತು ಪ್ರಕ್ರಿಯೆಗಳಪಟ್ಟ ವಿಶೇಷ ಚೇತನ ಮಕ್ಕಳ ಸಂಖ್ಯೆ 108 ಒಟ್ಟು 129.
ಮಕ್ಕಳನ್ನು ದತ್ತು ಪ್ರಕ್ರಿಯೆ ಒಳಪಡಿಸಲಾಗಿದೆ. 2025-26 ನೇ ಸಾಲಿನ ಘೋಷವಾಕ್ಯ “ವಿಶೇಷ ಅಗತ್ಯವುಳ್ಳ ಮಕ್ಕಳ ದತ್ತು ಪ್ರಕ್ರಿಯೆ”(Adoption of children having Special Needs) ಎಂಬ ವಿಶೇಷ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು ಈ ವರ್ಷದ ಘೋಷವಾಕ್ಯ ಬಹಳ ವಿಶೇಷವಾಗಿದ್ದು ದೈಹಿಕವಾಗಿ, ಮಾನಸಿಕ, ಭಾವನಾತ್ಮಕ, ನಡವಳಿಕೆಯ ಅಥವಾ ಕಲಿಕೆಯ ವ್ಯತ್ಯಾಸಗಳ ಕಾರಣದಿಂದಾಗಿ ಇತರ ಮಕ್ಕಳಿಗಿಂತ ಹೆಚ್ಚುವರಿ ಸಹಾಯ ಅಥವಾ ಬೆಂಬಲ ವಿಶೇಷ ಕಾಳಜಿ ಅವಶ್ಯಕತೆ ಇರುವ ಮಕ್ಕಳು ಕೇವಲ ಕುಟುಂಬದಲ್ಲಿ ಮಾತ್ರವಲ್ಲ ಸಮಾಜದಲ್ಲಿಯೂ ಕೂಡ ನಿರ್ಲಕ್ಷಗೊಳಗಾಗುವಂತಹ ಇಂತಹ ಮಕ್ಕಳಿಗೂ ಕೂಡ ದತ್ತು ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವುದರ ಮೂಲಕ ಉತ್ತಮ ಕುಟುಂಬದ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ /ಇಲಾಖೆಯ ಕ್ರಮ ಶ್ಲಾಘನೀಯವಾಗಿದೆ.
ಈ ತಿಂಗಳಾದ್ಯಂತ ನಡೆಯುವ ವಿಶೇಷ ಮಾಸಾಚರಣೆಯ ಉದ್ದೇಶ ಕಾನೂನು ರೀತಿ ದತ್ತು ಪಕ್ರಿಯ ಕುರಿತು ಜಾಗೃತಿ ಮೂಡಿಸುವುದು, ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ದತ್ತು ಪ್ರಕ್ರಿಯೆಗೆ ಉತ್ತೇಜಿಸುವುದು ಮತ್ತು ದತ್ತು ಪಡೆದ ಕುಟುಂಬಗಳನ್ನು ಬೆಂಬಲಿಸುವುದಾಗಿದೆ.
ಕಾರಣಾಂತರಗಳಿಂದ ಹೆತ್ತವರಿಗೆ ಬೇಡವಾದ ಮಗುವನ್ನು ಸರ್ಕಾರದ ವಶಕ್ಕೆ ಒಪ್ಪಿಸುವುದು ಇಂತಹ ಮಕ್ಕಳನ್ನು ಸರ್ಕಾರವು ಸುರಕ್ಷಿತವಾಗಿ ಪೋಷಿಸುತ್ತದೆ ಮತ್ತು ಮಗುವಿಗಾಗಿ ಹಂಬಲಿಸುವ ಪೋಷಕರಿಗೆ ಕಾನೂನು ಬದ್ಧವಾಗಿ ದತ್ತು ನೀಡುವ ಮೂಲಕ ಮಗುವಿಗೆ ಸುಭದ್ರ ಬದುಕನ್ನು ಕಟ್ಟಿಕೊಡುತ್ತದೆ.
ಜಾಗೃತಿ ಮೂಡಿಸುವುದು: ದತ್ತು ಪ್ರಕ್ರಿಯೆ ಮತ್ತು ಪಾಲನೆಗೊಳಗಾದ ಮಕ್ಕಳ ಅಗತ್ಯಗಳ ಕುರಿತು ಸಾರ್ವಜನಿಕರನ್ನು ಶಿಕ್ಷಣಗೊಳಿಸುವುದು. ಈ ಮೇಲಿನ ಅಂಕಿ ಅಂಶಗಳು ಗಮನಿಸಿದ್ದಲ್ಲಿ ವಿಶೇಷ ಮಕ್ಕಳು ಹೆಚ್ಚು ವಿದೇಶಿ ದತ್ತು ಪ್ರಕ್ರಿಯೆಗೊಳಲಾಗುತ್ತಿತ್ತು, ದೇಶಿಯವ ದತ್ತು ಪ್ರಕ್ರಿಯೆಗೆ ವಿಶೇಷ ಅಗತ್ಯಗಳಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸುವುದು.
ದತ್ತು ಪಡೆದ ಕುಟುಂಬಗಳು ಮತ್ತು ಜೀವಮಾನಿಕ ಪೋಷಕರಿಗೆ ಸಂಪನ್ಮೂಲಗಳು ಹಾಗೂ ಬೆಂಬಲ ಒದಗಿಸುವುದು.
ದತ್ತು ಪ್ರಕ್ರಿಯೆ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸಲು ಸಮುದಾಯ ಮಟ್ಟದ ಅಭಿಯಾನಗಳು ಹಮ್ಮಿಕೊಳ್ಳಲಾಗುತ್ತಿದೆ
ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ, ಸಂವಾದ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಇದರ ಉದ್ದೇಶವಾಗಿದೆ.
ಮಕ್ಕಳು ದೇಶದ ಅತ್ಯಂತ ಪ್ರಮುಖ ಆಸ್ತಿ ಅದು ಗಂಡಾಗಲಿ ಹೆಣ್ಣಾಗಲಿ, ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳಾಗಿರಬಹುದು ವಿಶೇಷ ಚೇತನ, ಅಗತ್ಯಗಳುಳ್ಳ. ಅಥವಾ ಸಾಮಾನ್ಯ ಮಕ್ಕಳಾಗಿರಬಹುದು ದೇಶದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಕೂಡ ಸುರಕ್ಷಿತ, ಆರೋಗ್ಯಕರ, ಘನತೆಯುತವಾದ ಬದುಕನ್ನು ಕಲ್ಪಿಸಿಕೊಡುವುದು ಸರ್ಕಾರ ಹಾಗೂ ಸಮುದಾಯದ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಹುಟ್ಟಿದ ಯಾವುದೇ ಮಗುವು ಕೂಡ ಅನಾಥವಾಗಿ ಬದುಕದೆ ಒಂದು ಸುರಕ್ಷಿತವಾದ ಕೌಟುಂಬಿಕ ವಾತಾವರಣದಲ್ಲಿ ಮಗುವಿನ ಪೋಷಣೆ ಆಗಬೇಕಾಗಿದ್ದು ಅದನ್ನು ಕಲ್ಪಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ನವೆಂಬರ್ ತಿಂಗಳ ಈ ದತ್ತು ಮಾಸವನ್ನು ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳುವುದರ ಮೂಲಕ ಕಾನೂನುಬಾಹಿರ ದತ್ತು ಪ್ರಕ್ರಿಯೆಗಳನ್ನು ಹೋಗಲಾಡಿಸಿ ದತ್ತು ನಿಯಮಾವಳಿಗಳು- 2022. ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣಾ) ಕಾಯ್ದೆ-2015. ಹಿಂದೂ ದತ್ತಕ ಕಾಯ್ದೆ – 1956. ಈ ಕಾಯ್ದೆಗಳನ್ನುವಯ ದತ್ತು ಪ್ರಕ್ರಿಯೆಗೆ ಉತ್ತೇಜನ ನೀಡೋಣ.
ರಾಜ್ಯದಲ್ಲಿ ಒಟ್ಟು 45 ದತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸ್ಥಳೀಯ ವಿಶೇಷ ದತ್ತು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ. ಅಥವಾ ಮಕ್ಕಳ ಉಚಿತ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಸಂಭವನೀಯ ದತ್ತು ಪಡೆಯಲಿಚ್ಚಿಸಿರುವ ಪೋಷಕರು cara.wcd.gov.in ಪೋರ್ಟಲ್ ಭೇಟಿ ನೀಡುವುದರ ಮೂಲಕ ನೊಂದಾಯಿಸಿಕೊಳ್ಳಬಹುದು.
ನೀವು ಮಕ್ಕಳನ್ನು ‘ದತ್ತು’ ಪಡೆಯಬೇಕೇ? ಜಸ್ಟ್ ಹೀಗೆ ಮಾಡಿ, ‘ದತ್ತು ಮಗು’ ಪಡೆಯಿರಿ
BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ








