ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ ಜೈಲಲ್ಲಿ ಅಕ್ರಮ ಚಟುವಟಿಕೆ ಕಾನೂನುಬಾಹಿರ ಚಟುವಟಿಕೆ ವಿಡಿಯೋಗಳು ವೈರಲ್ ಆಗಿರುವ ಕುರಿತಂತೆ ಇಂದು ಕಾರಾಗೃಹ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಚಿವ ಜಿ ಪರಮೇಶ್ವರ್ ಸಭೆ ನಡೆಸಿದರು. ಸಭೆಯ ಬಳಿಕ ಪರಮೇಶ್ವರ್ ಅವರು ಸುದ್ದಿಗೋಷ್ಠಿ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅವರು, ಜೈಲು ಅಧಿಕ್ಷಕ ಮ್ಯಾಗೇರಿ ಹಾಗೂ ಉಪಾಧಿಕ್ಷಕ ಅಶೋಕ್ ಬಜಂತ್ರಿ ಸಸ್ಪೆಂಡ್ ಮಾಡಲಾಗಿದೆ.ಕೆಲ ಕಾನೂನು ಬಾಹಿರ ಚಟುವಟಿಕೆ ಆಗಿದೆ ಎಂದು ಪ್ರಸಾರ ಆಗಿದೆ. ಮಾಧ್ಯಮದಲ್ಲಿ ಪ್ರಸಾರ ಆಗಿರುವಂತಹ ವಿಡಿಯೋಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಮುಖ್ಯವಾದ ಕೆಲವು ವಿಡಿಯೋಗಳು 2023 ರಲ್ಲಿ ಆಗಿರುವುದು ಬೆಳಕಿಗೆ ಬಂದಿದೆ. ಒಂದೆರಡು ವಿಡಿಯೋಗಳು ಮಾತ್ರ 3-4 ತಿಂಗಳ ಹಿಂದೆ ಆಗಿವೆ. ಈ ಎಲ್ಲ ವಿಡಿಯೋಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ವಿಡಿಯೋಗಳು ತನಿಖೆಗೆ ಸಮಿತಿ ರಚನೆ ಮಾಡಿದ್ದೇವೆ.
ಇನ್ನು ಪರಪ್ಪನ ಅಗ್ರಹಾರ ದಿನ ಮುಖ್ಯ ಅಧ್ಯಕ್ಷಕ ಸುರೇಶ್ ಎತ್ತಂಗಡಿ ಮಾಡಲಾಗಿದ್ದು, ಇನ್ಮುಂದೆ ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಿತಿ ಒಂದನ್ನು ರಚನೆ ಮಾಡಿದ್ದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ, ಸಂದೀಪ್ ಪಾಟಿಲ್, ಅಮರನಾಥ್ ರೆಡ್ಡಿ ರಿಷಂತ್ ಅವರನ್ನು ಒಳಗೊಂಡ ಸಮಿತಿಯು ಪರಿಶೀಲನೆ ಮಾಡಿದ ಬಳಿಕ ಸಮಗ್ರವಾದ ವರದಿ ನೀಡಬೇಕು.ಜೈಲುಗಳ ಮೇಲೆ ನಿಗಾ ವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು.








