ದಕ್ಷಿಣಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ಗೆ ಸಾಮಾಜಿಕ ಜಾಲತಾಣದಲ್ಲಿ 20 ವರ್ಷದ ಯುವತಿ ಒಬ್ಬಳು ಕಿರುಕುಳ ನೀಡಿದ್ದಾಳೆ ಈ ವಿಚಾರವಾಗಿ ಸಂಬಂಧಪಟ್ಟಂತೆ ಅನುಪಮಾ ಪರಮೇಶ್ವರಂ ಅವರು ಸೈಬರ್ ಠಾಣೆಗೆ ದೂರು ನೀಡಿದ್ದು ಕಿರುಕುಳ ನೀಡಿದ 20 ವರ್ಷದ ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಹೌದು ನಟಿಯ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ವಿಪರ್ಯಾಸ ಏನೆಂದರೆ, ಈ ಕೃತ್ಯ ಎಸಗಿರುವುದು ಕೂಡ ಓರ್ವ ಯುವತಿ! ಆ ಯುವತಿಯ ವಯಸ್ಸು ಕೇವಲ 20 ವರ್ಷ. ಈ ಬಗ್ಗೆ ಅನುಪಮಾ ಪರಮೇಶ್ವರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಆಕ್ಷೇಪಾರ್ಹ ಫೋಟೋ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿರುವುದು ತಿಳಿದುಬಂತು. ನನ್ನ ಪರಿಚಯದವರನ್ನು ಮತ್ತು ಕುಟುಂಬದವರನ್ನು ಟ್ಯಾಗ್ ಮಾಡಲಾಗುತ್ತಿತ್ತು. ಈ ರೀತಿ ಟಾರ್ಗೆಟ್ ಮಾಡಿ ಕಿರುಕುಳು ನೀಡಿದ್ದರಿಂದ ನನಗೆ ನಿಜಕ್ಕೂ ತೀವ್ರ ನೋವಾಗಿದೆ’ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದ್ದಾರೆ.
ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ! ಆಕೆಯ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಅವಳ ಗುರುತನ್ನು ನಾನು ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು’ ಎಂದು ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.








