ಮಂಗಳೂರು : ಶ್ರೀಮಂತರು ಹಾಗೂ ಉದ್ಯಮಿಗಳಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಇಂದ ಆರೋಪಿ ರೋಷನ್ ಸಲ್ಡಾನಗೆ ಸೇರಿದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ. ಸಲ್ಡಾನ ಮನೆ ಬ್ಯಾಂಕ್ ಖಾತೆ ಸೇರಿ ಒಟ್ಟು 2.5 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳಿಂದ ಮಾಡಲಾಗಿದ್ದು, ಪ್ರಮುಖ ಆರೋಪಿ ರೋಷನ್ ಸಲ್ದಾನ ಆತನ ಪತ್ನಿ ಡಬ್ನೀನೀತು ಹಾಗೂ ಇತರರ ವಿರುದ್ಧ ದಾಖಲಾದ ಎಫ್ಐಆರ್ ಆಧಾರದ ಮೇಲೆ ಇಡೀ ತನಿಖೆ ನಡೆಸುತ್ತಿದ್ದು, ಶ್ರೀಮಂತರು ಉದ್ಯಮಿಗಳಿಗೆ ಸಾಲ ಕೊಡಿಸುವ ಆಮಿಷ ಒಡ್ಡಿ ವಂಚನೆ ಎಸಗಲಾಗಿತ್ತು. ಆರೋಪಿ ರೋಷನ್ ಸಲ್ಡಾನ ಸುಮಾರು 200 ಕೋಟಿಗೂ ಅಧಿಕ ವಂಚನೆ ಎಸಗಿದ್ದ.








