ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ರಾಜಧಾನಿ ಬೆಂಗಳೂರು ಸೇರಿದಂತೆ ಹೈದರಾಬಾದ್, ದೆಹಲಿ ಹಾಗೂ ಗುಜರಾತ್ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದ ಪ್ರಕರಣಗಳು ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗುಜರಾತ್ ಮೂಲದ ಮಹಿಳಾ ಟೆಕ್ಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆಯ ವೇಳೆ ಮಹಿಳಾ ಟೆಕ್ಕಿ ಬಾಯಿಬಿಟ್ಟಿದ್ದು ಪೊಲೀಸರೇ ಶಾಕ್ ಆಗಿದ್ದಾರೆ.
ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರೆನೆ ಜೋಶಿಲ್ದಾನ ವಿಚಾರಣೆ ನಡೆಸಿದ ಉತ್ತರ ಸೆನ್ ವಿಭಾಗದ ಪೊಲೀಸರು ವಾಪಸ್ ಗುಜರಾತ್ಗೆ ಬಿಟ್ಟು ಬಂದಿದ್ದಾರೆ. ಈ ನಡುವೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ನೇಮಗೌಡ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಅಸ್ಪಷ್ಟ ಹಾಗೂ ವಿಚಿತ್ರ ಹೇಳಿಕೆಗಳನ್ನು ನೀಡಿದ್ದಾಳೆ. ಹೀಗಾಗಿ ರೆನೆ ಜೋಶಿಲ್ದಾ ಪ್ರಿಯಕರ ಪ್ರಭಾಕರ್‌ಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ತನಿಖೆ ವೇಳೆ ಬೆಚ್ಚಿ ಬಿದ್ದ ಪೊಲೀಸರು
ಮೂಲತಃ ಗುಜರಾತ್ನವಳಾಗಿರುವ ರೆನೆ ಜೋಶಿಲ್ದಾ ಚೆನ್ನೈ ಏರ್ಪೋರ್ಟ್ ರಸ್ತೆಯ ಲುಮಿನಾ ಬ್ಲಾಕ್‌ನಲ್ಲಿ ವಾಸವಾಗಿದ್ದಳು. ಅಲ್ಲಿ ಬಿಇ ಎಲೆಕ್ಟ್ರಿಕಲ್ ವಿದ್ಯಾಭ್ಯಾಸ ಮುಗಿಸಿದ್ದಳು. ಹೀಗೆ 2023ರಲ್ಲಿ ಬೆಂಗಳೂರಿಗೆ ಬಂದಿದ್ದಳು. ಯಮಲೂರಿನ ಖಾಸಗಿ ಕಂಪನಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ರೋಬೋಟಿಕ್ ಇಂಜಿನಿಯರಿಂಗ್ ಹಿನ್ನಲೆ ಹೊಂದಿದ ರೆನಿಗೆ ತಾಂತ್ರಿಕ ಜ್ಞಾನವೂ ಸಾಕಷ್ಟಿತ್ತು. 2023 ರಿಂದ 2024 ರವರೆಗೆ ಕೆಲಸ ನಿರ್ವಹಿಸಿದ ಅವಧಿಯಲ್ಲಿ ಸ್ನೇಹಿತೆಯ ಮೂಲಕ ಪ್ರಭಾಕರ್ ಜೊತೆ ಪರಿಚಯವಾಗಿದ್ದು ನಂತರ ಪ್ರೇಮಕ್ಕೆ ತಿರುಗಿತ್ತು.
ಬಳಿಕ ಪ್ರಭಾಕರ್ ಮತ್ತೊಬ್ಬಳನ್ನು ಮದುವೆಯಾದ ನಂತರ ರೆನಿ ತನ್ನ ಪ್ರೇಮ ವೈಫಲ್ಯಕ್ಕೆ ಪ್ರತೀಕಾರವಾಗಿ ಇಮೇಲ್ ಬಾಂಬ್ ಬೆದರಿಕೆ ಕಳುಹಿಸಿದ್ದಾಳೆ. ಇದಕ್ಕೂ ಮುನ್ನ ಆಕೆ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಪ್ರೇಮ ವೈಫಲ್ಯದ ಬಗ್ಗೆ ಸಮಾಲೋಚನೆ ನಡೆಸಿದ್ದಳು ಎನ್ನಲಾಗಿದೆ. ಆಗ, ಪ್ರಭಾಕರ್ ಹೆಸರಿಗೆ ಮಸಿ ಬಳಿಯುವಂತೆ ಏನಾದರೂ ಮಾಡು ಎಂದು ಜ್ಯೋತಿಷಿ ಸಲಹೆ ನೀಡಿದ್ದರು. ಅದಾದ ನಂತರ ಯುವತಿ ಬಾಂಬ್ ಬೆದರಿಕೆ ಹಾಕುವಂಥ ಕೃತ್ಯಕ್ಕೆ ಕೈಹಾಕಿದ್ದಳು ಎನ್ನಲಾಗಿದೆ.
ತನಗೆ ಗುರುತು ಪತ್ತೆಯಾಗದಂತೆ ಪ್ರಭಾಕರ್‌ನ ಇಮೇಲ್ ಐಡಿಯನ್ನು ಬಳಸಿ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ ಎಂಬ ವಿಚಾರವೂ ವಿಚಾರಣೆಯಲ್ಲಿ ಹೊರಬಂದಿದೆ. VPN ಸೇವೆ, ವರ್ಚುವಲ್ ನಂಬರ್ ಅಪ್ಲಿಕೇಶನ್ ಹಾಗೂ ಇಂಟರ್ನೆಟ್ ಸರ್ಚ್ ಮೂಲಕ ಪ್ಲಾನ್ ರೂಪಿಸಿದ್ದಾಳೆ ಎಂಬುದಾಗಿ ರೆನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.ವರ್ಷಕ್ಕೆ 34 ಲಕ್ಷ ರೂ. ಪ್ಯಾಕೇಜ್ ಸ್ಯಾಲರಿ ಇದ್ದರೂ ಅದನ್ನು ಬಿಟ್ಟು ದ್ವೇಷಕ್ಕೆ ಡಾರ್ಕ್ ವೆಬ್ ಮೂಲಕ ಇಡೀ ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ದೇಶಾದ್ಯಂತ ಬರೋಬ್ಬರಿ 30 ಕ್ಕೂ ಹೆಚ್ಚು ಪ್ರಕರಣಗಳು ಆರೋಪಿತೆ ರೆನಿ ಮೇಲಿದ್ದು, ದೆಹಲಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.








