ಪ್ರೀತಿ ನಿರಾಕರಿಸಿದಕ್ಕೆ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಯುವಕನ ಮನೆಯ ಮುಂದೆ ಇದೀಗ ಯುವತಿಯ ಕುಟುಂಬಸ್ಥರು ಶವ ಇಟ್ಟು ಧರಣಿ ನಡೆಸುತ್ತಿದ್ದಾರೆ. ಕುದುರಿಹಾಳ ಗ್ರಾಮದ ಯುವಕನ ಮನೆ ಮುಂದೆ ಕುಟುಂಬ ಪ್ರತಿಭಟನೆ ನಡೆಸುತ್ತಿದೆ.
ಹೌದು ಪ್ರೀತಿ ನಿರಾಕರಿಸಿದ ಕ್ಕೆ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕುದುರಿಹಾಳ ಗ್ರಾಮದ ಸಿಂಧು ಅದೇ ಗ್ರಾಮದ ಶರತ್ ನೀಲಪ್ಪನವರನ್ನ ಪ್ರೀತಿಸುತ್ತಿದ್ದಳು. ಆದರಿಂದ ಗರ್ಭಿಣಿಯಾದ ಬಳಿಕ ಶರತ್ ಪ್ರೀತಿ ನಿರಾಕರಿಸಿದನಂತೆ ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಯುವಕನ ಮನೆಯ ಮುಂದೆ ಶವ ಇಟ್ಟು ಕುಟುಂಬದವರು ಧರಣಿ ನಡೆಸುತ್ತಿದ್ದಾರೆ.








