ಬೆಂಗಳೂರು: ನಾವೇ ಬ್ಯಾಂಕ್ ನಿಂದ ಬಡ್ಡಿ ತೆಗೆದುಕೊಂಡು ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದೇವೆ. ಹೀಗೆ ಕಷ್ಟದಲ್ಲಿ ಇರುವಾಗ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಅಸಾಧ್ಯವಾದ ಮಾತಾಗಿದೆ. ಬೇಕಾದ್ರೆ ಕಷ್ಟದಲ್ಲಿರುವಂತ ನಮ್ಮ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರವೇ ತೆಗೆದುಕೊಂಡು ನಡೆಸಲಿ. ನಾವು ಮಾತ್ರ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸೋದಕ್ಕೆ ಅಸಾಧ್ಯ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಇಂದು ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಿಎಂ ಮುಂದೆ ತಮ್ಮ ಕಷ್ಟದ ಅಳಲನ್ನು ಸಕ್ಕರೆ ಕಾರ್ಖಾನೆ ಮಾಲೀಕರು ತೋಡಿಕೊಂಡರು. ಉತ್ತರ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಅನುಕೂಲ ಆಗುವಂತಿದೆ. ಸಕ್ಕರೆ ಉತ್ಪಾದನೆ, ಮಾರಾಟದಲ್ಲಿ ಅವರಿಗೆ ಅನುಕೂಲವಾಗ್ತಿದೆ. ದಕ್ಷಿಣ ಭಾರತದ ಕಾರ್ಖಾನೆಗಳಿಗೆ ಅನ್ಯಾಯ ಆಗುತ್ತಲೇ ಇದೆ. ಉತ್ತರ ಭಾರತದ ಕಾರ್ಖಾನೆ ಮಾಲೀಕರು ಕೇಂದ್ರದ ವಿರುದ್ಧ ಧ್ವನಿ ಎತ್ತುವುದಿಲ್ಲ. ನಾವು ಧ್ವನಿ ಎತ್ತಿಯೂ ಪ್ರಯೋಜನ ಆಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.
ಕಬ್ಬು ಬೆಳೆಗಾರರ ಕಣ್ಣೀರು ಒರೆಸಲು ನಾವು ಸಾಲ ಮಾಡಿ ಬ್ಯಾಂಕ್ ಬೆನ್ನು ಬಿದ್ದು ಕಾರ್ಖಾನೆ ಮಾಡಿದ್ದೇವೆ. ಆದರೆ, ರೈತರ ಹೆಸರಿನಲ್ಲಿ ಕೆಲವರ ಬಾಯಲ್ಲಿ ಬರುತ್ತಿರುವ ಮಾತುಗಳು ನೋವಾಗ್ತಿವೆ. ನಮ್ಮನ್ನು ದರೋಡೆಕೋರರು ಎನ್ನುತ್ತಿದ್ದಾರೆ. ಇದೆಲ್ಲ ಸಾಕಾಗಿದೆ. ನಷ್ಟದಲ್ಲಿ ನಾವು ಕಾರ್ಖಾನೆ ನಡೆಸಬೇಕೆಂದರೆ ಸಕ್ಕರೆ ಕಾರ್ಖಾನೆಗಳನ್ನೇ ಬಿಟ್ಟು ಕೊಡ್ತೇವೆ. ಸರ್ಕಾರವೇ ನಡೆಸಲಿ, ಬೇರೆ ಯಾರಾದರೂ ನಡೆಸಲಿ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕಷ್ಟ ಆಗ್ತಿದೆ. ಮಹಾರಾಷ್ಟ್ರದ ಕಬ್ಬಿನಲ್ಲಿ ರಿಕವರಿ ಪ್ರಮಾಣ ಶೇ.14ರಷ್ಟಿದೆ. ಅವರಿಗೆ ಹೋಲಿಸಿ ಇಲ್ಲಿನವರು ಅದೇ ಹಣ ಕೇಳ್ತಾರೆ. ಆದರೆ ಇಲ್ಲಿನ ಕಬ್ಬಿನಿಂದ ಸಿಗುವ ರಿಕವರಿ ಪ್ರಮಾಣ ಕಡಿಮೆ ಇದೆ. ಸಕ್ಕರೆ ಕಾರ್ಖಾನೆ ಮಾಲೀಕರು ಕಾರ್ಮಿಕರ ಸವಲತ್ತು, ಸಂಬಳ ಇತ್ಯಾದಿ ನೋಡಿಕೊಳ್ಳಬೇಕು. ರೈತರ ಬೇಡಿಕೆಗಳನ್ನೂ ನೋಡಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ, ವಿದ್ಯುತ್, ಎಥೆನಾಲ್ ಉತ್ಪಾದನೆ ಮಾಡಿದರೂ ನಿರಂತರ ನಷ್ಟದಲ್ಲಿ ಇದ್ದೇವೆ. ನಾವು ಹೇಗೆ ಕಬ್ಬು ಬೆಳೆಗಾರರ ಬೇಡಿಕೆ ಈಡೇಸಲಿ? ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಅಸಾಧ್ಯ ಎಂಬುದಾಗಿ ಪಟ್ಟು ಹಿಡಿದಿರುವುದಾಗಿ ಹೇಳಲಾಗುತ್ತಿದೆ.
BREAKING: ಬೆಳಗಾವಿಯಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ವಾಹನಗಳ ಮೇಲೆ ಕಲ್ಲು ತೂರಾಟ
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಸಿಎಂ ಸಿದ್ಧರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ: HDK








