ನವದೆಹಲಿ : ದೇಶಾದ್ಯಂತ ಬೀದಿನಾಯಿಗಳ ಉಪಟಳ ಹೆಚ್ಚಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ಆದೇಶ ಹೊರಡಿಸಿದ್ದು ಬೀದಿ ನಾಯಿಗಳ ಕಾಟ ತಡೆಯಲು ಆಸ್ಪತ್ರೆಗಳು ಶಾಲೆಗಳು ಹಾಗೂ ಕಾಲೇಜುಗಳಿಗೆ ಬೇಲಿ ಹಾಕುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಹೆದ್ದಾರಿಗಳಿಂದ ಬೀದಿ ಪ್ರಾಣಿಗಳನ್ನು ತಡೆಯಲು ಕ್ರಮವಹಿಸಲು ಸೂಚನೆ ನೀಡಿದೆ ಎರಡು ವಾರದಲ್ಲಿ ಬೇಲಿ ಹಾಕುವ ಕೆಲಸ ಆಗಬೇಕು ಇದರ ನಿರ್ವಹಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಸ್ಥಳೀಯ ಆಡಳಿತ ಸಂಸ್ಥೆಗಳು ಮೂರು ತಿಂಗಳಿಗೊಮ್ಮೆ ಪರಿಶೀಲಿಸಬೇಕು ಹೆದ್ದಾರಿಗಳಲ್ಲಿ ಪ್ರಾಣಿಗಳನ್ನು ಪತ್ತೆಹಚ್ಚಲು ಗಸ್ತು ತಂಡ ರಚಿಸಬೇಕು ಪ್ರಾಣಿಗಳ ಬಗ್ಗೆ ದೂರು ನೀಡಲು ಸಹಾಯವಾಣಿ ಸ್ಥಾಪಿಸಬೇಕು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತು ಆದೇಶ ಜಾರಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.








